Shreyas Iyer: ‘ಹಸಿದಾಗ ಹಳಸಿದ ಅನ್ನವೂ ಮದುವೆ ಊಟದಂತೆ’: ಶ್ರೇಯಸ್ ಅಯ್ಯರ್ ಗೆಲುವಿಗೆ ಮಾಜಿ ಕ್ರಿಕೆಟಿಗ ರಮೇಶ್ ಹಾಸ್ಯಮಯ ಪ್ರತಿಕ್ರಿಯೆ
ನವದೆಹಲಿ: ಟಿ20 ಕ್ರಿಕೆಟ್‌ನಲ್ಲಿ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದ್ದ ಭಾರತ ತಂಡಕ್ಕೆ ಕೊನೆಗೂ ಜಿಂಬಾಬ್ವೆ ವಿರುದ್ಧ ಜಯ ಸಿಕ್ಕಿದೆ. ಸೂರ್ಯಕುಮಾರ್ ಯಾದವ್ ಅವರಿಂದ ನಾಯಕತ್ವ ವಹಿಸಿಕೊಂಡ ನಂತರ ಸತತ ಆರು ಪಂದ್ಯಗಳಲ್ಲಿ ಮುಖಭಂಗ ಅನುಭವಿಸಿದ್ದ ಶ್ರೇಯಸ್ ಅಯ್ಯರ್, (Shreyas Iyer) ಟಿ20 ನಾಯಕನಾಗಿ ತಮ್ಮ ಮೊದಲ ಗೆಲುವಿನ ಸಿಹಿ ಉಂಡಿದ್ದಾರೆ. ಹರಾರೆಯಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಟಿ20ಯಲ್ಲಿ ಭಾರತ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸೋಲಿನ ಸರಣಿಗೆ ತೆರೆ ಎಳೆದಿದೆ. ಹಸಿದ…
