Shiv Ratan: ಬಿಕಾಜಿ ಫುಡ್ಸ್ ಸಂಸ್ಥಾಪಕ ಶಿವ ರತನ್ ಅಗರ್ವಾಲ್ ನಿಧನ
ಚೆನ್ನೈ: ಪ್ಯಾಕೇಜ್ಡ್ ಸ್ನ್ಯಾಕ್ಸ್ ಮತ್ತು ಸಿಹಿತಿಂಡಿಗಳ ಕ್ಷೇತ್ರದಲ್ಲಿ ದೇಶದ ಪ್ರಮುಖ ಕಂಪನಿಯಾಗಿರುವ ‘ಬಿಕಾಜಿ ಫುಡ್ಸ್ ಇಂಟರ್ನ್ಯಾಷನಲ್’ನ ಸಂಸ್ಥಾಪಕ ಮತ್ತು ಅಧ್ಯಕ್ಷ ಶಿವ ರತನ್ ಅಗರ್ವಾಲ್ (Shiv Ratan) ಅವರು ನಿಧನರಾಗಿದ್ದಾರೆ. ಏಪ್ರಿಲ್ 23 ರಂದು ಅಗರ್ವಾಲ್ ವಿಧಿವಶರಾಗಿರುವ ವಿಷಯವನ್ನು ಕಂಪನಿಯು ಷೇರುಪೇಟೆಗೆ ನೀಡಿರುವ ಅಧಿಕೃತ ಮಾಹಿತಿಯಲ್ಲಿ ಖಚಿತಪಡಿಸಿದೆ. ಸಾಂಪ್ರದಾಯಿಕ ಭಾರತೀಯ ತಿಂಡಿ ತಿನಿಸುಗಳನ್ನು ದೇಶ-ವಿದೇಶಗಳಲ್ಲಿ ಜನಪ್ರಿಯಗೊಳಿಸುವಲ್ಲಿ ಅಗರ್ವಾಲ್ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವರ ನಿಧನದ ಕಾರಣವನ್ನು ಕಂಪನಿ ಬಹಿರಂಗಪಡಿಸಿಲ್ಲ. ಕಂಪನಿ ಹೇಳಿದ್ದೇನು? ನಿಯಮಗಳ ಪ್ರಕಾರ ಶಿವ…
