Sonia Gandhi: ಕೇಂಬ್ರಿಡ್ಜ್‌ನ ಪುಟ್ಟ ರೆಸ್ಟೋರೆಂಟ್‌ನಲ್ಲಿ ಶುರುವಾದ ಪ್ರೇಮಕಥೆ: ರಾಜೀವ್ ಗಾಂಧಿ ಜೊತೆಗಿನ ಮೊದಲ ಭೇಟಿಯ ನೆನಪುಗಳನ್ನು ಹಂಚಿಕೊಂಡ ಸೋನಿಯಾ ಗಾಂಧಿ!
ಹೊಸದೆಹಲಿ: ಭಾರತೀಯ ರಾಜಕೀಯ ಇತಿಹಾಸದಲ್ಲಿ ದೀರ್ಘಕಾಲದವರೆಗೆ ನಿರ್ಣಾಯಕ ಪಾತ್ರ ವಹಿಸಿರುವ ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರು ತಮ್ಮ ಜೀವನದ ಅತ್ಯಂತ ಮಧುರ ಹಾಗೂ ವೈಯಕ್ತಿಕ ನೆನಪುಗಳನ್ನು ತೆರೆದಿಟ್ಟಿದ್ದಾರೆ. ಇಂಗ್ಲೆಂಡ್‌ನ ಕೇಂಬ್ರಿಡ್ಜ್ ನಗರದಲ್ಲಿರುವ ಪುಟ್ಟ ಗ್ರೀಕ್ ರೆಸ್ಟೋರೆಂಟ್ ಒಂದರಲ್ಲಿ ಅಂದು ನಡೆದ ಆಕಸ್ಮಿಕ ಭೇಟಿಯು ತಮ್ಮ ಇಡೀ ಜೀವನದ ಹಾದಿಯನ್ನೇ ಬದಲಾಯಿಸಿತು ಎಂಬುದನ್ನು ಅವರು ಸ್ಮರಿಸಿಕೊಂಡಿದ್ದಾರೆ. ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರೊಂದಿಗಿನ ಮೊದಲ ಭೇಟಿ, ಆ ಕ್ಷಣದಲ್ಲೇ ಉಂಟಾದ ಪರಸ್ಪರ…
