Toxic: ‘ಟಾಕ್ಸಿಕ್’ ಸಿನಿಮಾ ನೋಡಿ ಥಿಯೇಟರ್‌ನಿಂದ ಮಧ್ಯದಲ್ಲೇ ಹೊರಬಂದ ಪವಿ ಪೂವಪ್ಪ!: ಯಶ್ ಸಿನಿಮಾ ಬಗ್ಗೆ ಬಿಗ್ ಬಾಸ್ ನಟಿ ಹೇಳಿದ್ದೇನು?
ಬೆಂಗಳೂರು: ಖ್ಯಾತ ನಟ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಪ್ರದರ್ಶನ ಕಾಣುತ್ತಿದ್ದು, ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ನಟಿ ಪವಿ ಪೂವಪ್ಪ ಅವರು ಚಿತ್ರದ ಕುರಿತು ನೀಡಿರುವ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಿಸಿದ ಪವಿ ಪೂವಪ್ಪ, ‘ಟಾಕ್ಸಿಕ್’ ಚಿತ್ರ ತಮಗೆ ಅಷ್ಟಾಗಿ ಇಷ್ಟವಾಗಲಿಲ್ಲ ಎಂಬ ತಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಈ ಸಿನಿಮಾ ಅಷ್ಟೊಂದೇನೂ ಇಷ್ಟವಾಗಲಿಲ್ಲ ಸಿನಿಮಾ ವೀಕ್ಷಿಸಿದ ಬಳಿಕ ಮಾಧ್ಯಮಗಳೊಂದಿಗೆ…
