NCW: ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಕೇವಲ ದೈಹಿಕ ಕೃತ್ಯವಷ್ಟೇ ಮಾನದಂಡವಲ್ಲ; ಸಂತ್ರಸ್ತೆಯ ಘನತೆಗೂ ಆದ್ಯತೆ ನೀಡಿ: ರಾಷ್ಟ್ರೀಯ ಮಹಿಳಾ ಆಯೋಗ!
ನವದೆಹಲಿ: ಮಹಿಳೆಯರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ನ್ಯಾಯಾಲಯಗಳು ಕೇವಲ ದೈಹಿಕ ಕೃತ್ಯದ ಆಧಾರದ ಮೇಲೆ ಮಾತ್ರವೇ ವ್ಯಾಖ್ಯಾನಿಸಬಾರದು ಎಂದು ರಾಷ್ಟ್ರೀಯ ಮಹಿಳಾ ಆಯೋಗದ (NCW) ಅಧ್ಯಕ್ಷೆ ವಿಜಯಾ ರಹಾತ್ಕರ್ ಅಭಿಪ್ರಾಯಪಟ್ಟಿದ್ದಾರೆ. ಇಂತಹ ಗಂಭೀರ ಪ್ರಕರಣಗಳನ್ನು ಪರಿಗಣಿಸುವಾಗ ಸಂತ್ರಸ್ತೆಯ ಘನತೆ, ಆಕೆಯ ಒಪ್ಪಿಗೆ, ಅನುಭವಿಸಿದ ಭಯ ಹಾಗೂ ಮಾನಸಿಕ ಆಘಾತಕ್ಕೂ ಸಮಾನ ಆದ್ಯತೆ ನೀಡಬೇಕು ಎಂದು ಅವರು ಬುಧವಾರ (ಜುಲೈ 15, 2026) ಪ್ರತಿಪಾದಿಸಿದ್ದಾರೆ. ಚರ್ಚೆಗೆ ಗ್ರಾಸವಾಗಿದ್ದ ಹೈಕೋರ್ಟ್ ತೀರ್ಪು ಮಹಿಳೆಯೊಬ್ಬಳ ಸಲ್ವಾರ್ ತೆಗೆಯಲು ಯತ್ನಿಸುವುದು ಮತ್ತು…
