Big News: ಆರ್ಆರ್ ನಗರ ಬಿಜೆಪಿಯಲ್ಲಿ ಭಾರಿ ಬಿರುಗಾಳಿ: ಶಾಸಕ ಮುನಿರತ್ನ ವಿರುದ್ಧ ಆಕ್ರೋಶಗೊಂಡು ರಾಜೀನಾಮೆ ನೀಡಿದ ಮಾಜಿ ಕಾರ್ಪೋರೇಟರ್
ಬೆಂಗಳೂರು: ರಾಜಧಾನಿ ಬೆಂಗಳೂರಿನ ರಾಜರಾಜೇಶ್ವರಿ ನಗರ (ಆರ್ಆರ್ ನಗರ) ವಿಧಾನಸಭಾ ಕ್ಷೇತ್ರದ ಬಿಜೆಪಿ ರಾಜಕೀಯದಲ್ಲಿ ಮತ್ತೆ ಭಾರಿ ಬಿರುಗಾಳಿ ಎದ್ದಿದೆ. ಕ್ಷೇತ್ರದ ಶಾಸಕ ಮುನಿರತ್ನ ಅವರ ಏಕಪಕ್ಷೀಯ ನಡವಳಿಕೆ, ಸಾರ್ವಜನಿಕರ ಮೇಲಿನ ದೌರ್ಜನ್ಯ ಹಾಗೂ ಕಾರ್ಯಕರ್ತರ ಮೇಲಿನ ಕಿರುಕುಳದಿಂದ ಬೇಸತ್ತು ಮಾಜಿ ಬಿಬಿಎಂಪಿ ಕಾರ್ಪೋರೇಟರ್ ಹಾಗೂ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರಿಂದ ‘ಬೆಸ್ಟ್ ಕಾರ್ಪೋರೇಟರ್ ಆಫ್ ಬೆಂಗಳೂರು’ ಬಿರುದು ಪಡೆದಿದ್ದ ಜಿ.ಕೆ. ವೆಂಕಟೇಶ್ (ಎಸ್.ಟಿ.ಆರ್) ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ದಿಢೀರ್ ರಾಜೀನಾಮೆ (Big…
