Cyber Crime: ಬೆಳಗಾವಿ ಮ್ಯಾಟ್ರಿಮೋನಿ ವಂಚನೆ: ವಿದೇಶಿ ‘ಡೆಂಟಿಸ್ಟ್’ ನಾಟಕವಾಡಿ ಯುವತಿಗೆ ₹3.38 ಲಕ್ಷ ನಾಮ ಹಾಕಿದ ಗಿರಾಕಿ!
ಬೆಳಗಾವಿ: ಮ್ಯಾಟ್ರಿಮೋನಿ ಆ್ಯಪ್‌ಗಳ (Cyber Crime) ಮೂಲಕ ಮದುವೆಗಾಗಿ ವರನ ಹುಡುಕಾಟ ನಡೆಸುವ ಯುವತಿಯರನ್ನೇ ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಅಂತರರಾಜ್ಯ ಜಾಲವೊಂದು ಬೆಳಗಾವಿಯಲ್ಲಿ ಪತ್ತೆಯಾಗಿದೆ. ವಿದೇಶದಲ್ಲಿ ದಂತ ವೈದ್ಯ (ಡೆಂಟಿಸ್ಟ್) ಎಂದು ನಂಬಿಸಿ ಇಲ್ಲಿನ ಯುವತಿಯೊಬ್ಬಳಿಗೆ ಬರೋಬ್ಬರಿ 3,38,800 ರೂಪಾಯಿ ವಂಚಿಸಿರುವ ಆಘಾತಕಾರಿ ದೂರು ದಾಖಲಾಗಿದೆ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಬೆಳಗಾವಿ ನಗರದ ಸಿಇಎನ್ (CEN) ಕ್ರೈಮ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಅವರು ಮಂಗಳವಾರ…
