America: ಇರಾನ್ ಬಿಕ್ಕಟ್ಟು ಇತ್ಯರ್ಥಕ್ಕೆ ರಾಜತಾಂತ್ರಿಕ ಪ್ರಯತ್ನ: ಮುಂದಿನ ಕೆಲವು ಗಂಟೆಗಳಲ್ಲಿ ಜಗತ್ತಿಗೆ ಶುಭ ಸುದ್ದಿ ಎಂದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ
ನವದೆಹಲಿ: ಇರಾನ್ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿ ಮುಚ್ಚಿರುವುದರಿಂದ ಸೃಷ್ಟಿಯಾಗಿರುವ ಜಾಗತಿಕ ತೈಲ ಬಿಕ್ಕಟ್ಟಿನ ಮಧ್ಯೆಯೇ, ಈ ಉದ್ವಿಗ್ನ ವಾತಾವರಣವನ್ನು ತಿಳಿಗೊಳಿಸಲು ಮಹತ್ವದ ರಾಜತಾಂತ್ರಿಕ ಒಪ್ಪಂದವೊಂದು ಏರ್ಪಡುವ ಮುನ್ಸೂಚನೆಯನ್ನು ಅಮೆರಿಕ (America) ನೀಡಿದೆ. ಇರಾನ್‌ನ ಪರಮಾಣು ಯೋಜನೆ ಹಾಗೂ ಜಲಸಂಧಿಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಇಡೀ ವಿಶ್ವವೇ ಮುಂದಿನ ಕೆಲವು ಗಂಟೆಗಳಲ್ಲಿ ಅತ್ಯಂತ ಸಕಾರಾತ್ಮಕ ಸುದ್ದಿಯೊಂದನ್ನು ಕೇಳುವ ಸಾಧ್ಯತೆಯಿದೆ ಎಂದು ಭಾರತ ಪ್ರವಾಸದಲ್ಲಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಸುಳಿವು ನೀಡಿದ್ದಾರೆ. ಜೈಶಂಕರ್ ಜೊತೆ ರೂಬಿಯೋ ಮಾತುಕತೆ…
