Health Tips: ಲಿವರ್ ಹಾನಿಯಾದರೆ ದೇಹದಲ್ಲಿ ಈ ಅಪಾಯಕಾರಿ ಲಕ್ಷಣಗಳು ಕಾಣಿಸುತ್ತೆ: ಎಚ್ಚರ ತಪ್ಪಿದರೆ ಪ್ರಾಣಕ್ಕೆ ಆಪತ್ತು!
ಬೆಂಗಳೂರು: ಮಾನವ ದೇಹದ ಅತ್ಯಂತ ಪ್ರಮುಖ ಹಾಗೂ ಕಾರ್ಯನಿರತ ಅಂಗಗಳಲ್ಲಿ ಯಕೃತ್ತು (ಲಿವರ್) ಅಗ್ರಸ್ಥಾನದಲ್ಲಿದೆ. ನಾವು ಸೇವಿಸುವ ಆಹಾರವನ್ನು ಸರಿಯಾಗಿ ಜೀರ್ಣಗೊಳಿಸುವುದರ ಜೊತೆಗೆ, ಅದರಿಂದ ಜೀವಸತ್ವಗಳು, ಪ್ರೋಟೀನ್‌ಗಳು ಮತ್ತು ಗ್ಲೂಕೋಸ್‌ನಂತಹ ಅತ್ಯಾವಶ್ಯಕ ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುವಲ್ಲಿ ಲಿವರ್ (Health Tips) ನಿರ್ಣಾಯಕ ಪಾತ್ರ ವಹಿಸುತ್ತದೆ. ದೇಹದಲ್ಲಿ ಉತ್ಪತ್ತಿಯಾಗುವ ಹಾನಿಕಾರಕ ಅಮೋನಿಯಾವನ್ನು ಸುರಕ್ಷಿತ ಯೂರಿಯಾವಾಗಿ ಪರಿವರ್ತಿಸುವುದು ಮತ್ತು ಮದ್ಯ ಹಾಗೂ ನಿಕೋಟಿನ್‌ನಂತಹ ವಿಷಕಾರಿ ವಸ್ತುಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ಇಡೀ ದೇಹವನ್ನು ಶುದ್ಧೀಕರಿಸುವ ಜವಾಬ್ದಾರಿಯನ್ನು ಇದು ಹೊತ್ತಿದೆ. ದಿನದ 24…
