Japan: ಆಧ್ಯಾತ್ಮಿಕ ಲೋಕದಲ್ಲಿ ಎಐ ಕ್ರಾಂತಿ: ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ‘ರೋಬೋಟ್ ಸನ್ಯಾಸಿ’ಗಳ ಧರ್ಮ ಬೋಧನೆ!
ಟೋಕಿಯೋ: ಆಧ್ಯಾತ್ಮಿಕ ಲೋಕದಲ್ಲಿ ಈಗ ಕೃತಕ ಬುದ್ಧಿಮತ್ತೆಯ (AI) ಹೊಸ ಶಕೆ ಆರಂಭವಾಗಿದೆ. ಜಪಾನ್ (Japan) ಮತ್ತು ದಕ್ಷಿಣ ಕೊರಿಯಾದ ಬೌದ್ಧ ಮಂದಿರಗಳಲ್ಲಿ ಮನುಷ್ಯರ ಬದಲಿಗೆ ರೋಬೋಟ್ಗಳೇ ಧರ್ಮ ಬೋಧನೆ ಮಾಡುತ್ತಿದ್ದು, ಈ ‘ಹೈಟೆಕ್ ಸನ್ಯಾಸಿಗಳು’ ಭಕ್ತರಲ್ಲಿ ಅಚ್ಚರಿ ಮೂಡಿಸುತ್ತಿದ್ದಾರೆ. ಧರ್ಮ ಪ್ರಚಾರಕ್ಕೆ ನಿಂತ ರೋಬೋಟ್ಗಳು ದಕ್ಷಿಣ ಕೊರಿಯಾದ ಸೋಲ್ ನಗರದ ಪ್ರಸಿದ್ಧ ‘ಜೋಗ್ಯೆಸಾ’ ದೇವಾಲಯದಲ್ಲಿ ‘ಗಾಬಿ’ ಎಂಬ ಹೆಸರಿನ ರೋಬೋಟ್ ಸನ್ಯಾಸಿಯನ್ನು ಪರಿಚಯಿಸಲಾಗಿದೆ. ಸಾಂಪ್ರದಾಯಿಕ ಕಾಷಾಯ ವಸ್ತ್ರ ಧರಿಸಿರುವ ಈ ಯಂತ್ರ ಸನ್ಯಾಸಿ, ಧರ್ಮ ದೀಕ್ಷೆ…
