Mysuru Dasara: ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮ: ಜಂಬೂಸವಾರಿ ಅಂತಿಮ ರಿಹರ್ಸಲ್
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವಪ್ರಸಿದ್ಧ ದಸರಾ ಮಹೋತ್ಸವದ ವೈಭವವು ಉತ್ತುಂಗಕ್ಕೇರಿದೆ. ನಾಡಹಬ್ಬದ 9ನೇ ದಿನವಾದ ಇಂದು (Mysuru Dasara) ಸಾಂಸ್ಕೃತಿಕ ರಾಜಧಾನಿಯ ಮೂಲೆ ಮೂಲೆಯಲ್ಲೂ ಹತ್ತು ಹಲವು ಬಣ್ಣ ಬಣ್ಣದ ಸಾಂಸ್ಕೃತಿಕ, ಸಾಹಸಮಯ ಹಾಗೂ ಪಾರಂಪರಿಕ ಕಾರ್ಯಕ್ರಮಗಳು ಅನಾವರಣಗೊಂಡು ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸಿವೆ. ವಿಜಯದಶಮಿಯ ಪ್ರಮುಖ ಆಕರ್ಷಣೆಯಾದ ಭವ್ಯ ‘ಜಂಬೂಸವಾರಿ’ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ, ನಗರದಾದ್ಯಂತ ಹಬ್ಬದ ಕಳೆ ರಾರಾಜಿಸುತ್ತಿದೆ. ಅರಮನೆ ಅಂಗಳದಲ್ಲಿ ಜಂಬೂಸವಾರಿಯ ಅಂತಿಮ ಹಂತದ ತಾಲೀಮು ನಾಡಹಬ್ಬದ ಪ್ರಮುಖ ಘಟ್ಟವಾದ ವಿಜಯದಶಮಿ ಜಂಬೂಸವಾರಿಗೆ ದಿನಗಳು…
