India Post: ಅಂಚೆ ಇಲಾಖೆಯ ಇತಿಹಾಸದಲ್ಲೇ ಹೊಸ ದಾಖಲೆ: ಸತತ 2 ತ್ರೈಮಾಸಿಕಗಳಲ್ಲಿ ₹4,000 ಕೋಟಿಗೂ ಹೆಚ್ಚು ಆದಾಯ
ನವದೆಹಲಿ: ಭಾರತೀಯ ಅಂಚೆ ಇಲಾಖೆ (India Post) ಇತ್ತೀಚಿನ ವರ್ಷಗಳಲ್ಲಿ ಕೇವಲ ಪತ್ರ ಹಾಗೂ ಪಾರ್ಸೆಲ್ಗಳನ್ನು ರವಾನಿಸುವ ಸಾಂಪ್ರದಾಯಿಕ ಸಂಸ್ಥೆಯಾಗಿ ಉಳಿದಿಲ್ಲ, ಬದಲಾಗಿ ಆಧುನಿಕ ಡಿಜಿಟಲ್ ಹಾಗೂ ಲಾಜಿಸ್ಟಿಕ್ಸ್ ರಂಗದಲ್ಲಿ ದೈತ್ಯ ಮೈಲಿಗಲ್ಲನ್ನು ಸಾಧಿಸಿದೆ. 2026-27ನೇ ಹಣಕಾಸು ವರ್ಷದ ಸತತ ಎರಡು ತ್ರೈಮಾಸಿಕಗಳಲ್ಲಿ ತಲಾ 4,000 ಕೋಟಿ ರೂಪಾಯಿಗೂ ಅಧಿಕ ಆದಾಯ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ದೇಶಾದ್ಯಂತ ಆನ್ಲೈನ್ ಶಾಪಿಂಗ್ ಹಾಗೂ ಇ-ಕಾಮರ್ಸ್ ವಹಿವಾಟು ಪ್ರಚಂಡ ಪ್ರಮಾಣದಲ್ಲಿ ಹೆಚ್ಚಿರುವುದು ಅಂಚೆ ಇಲಾಖೆಯ ಈ ಐತಿಹಾಸಿಕ ಆರ್ಥಿಕ…
