Sandalwood: ಸ್ಯಾಂಡಲ್‌ವುಡ್ ಕ್ಯೂಟ್ ಕಪಲ್ ಮನೆಗೆ ಪುಟ್ಟ ಕೃಷ್ಣನ ಆಗಮನ: ಗಂಡು ಮಗುವಿಗೆ ಜನ್ಮ ನೀಡಿದ ಹರ್ಪಿಕಾ ಪೂಣಚ್ಚ
ಬೆಂಗಳೂರು: ಸ್ಯಾಂಡಲ್‌ವುಡ್‌ನ (Sandalwood) ಜನಪ್ರಿಯ ಹಾಗೂ ಮಾದರಿ ದಂಪತಿಗಳಲ್ಲೊಬ್ಬರಾದ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ತಮ್ಮ ಕೌಟುಂಬಿಕ ಜೀವನದ ಮತ್ತೊಂದು ಸುಂದರ ಹಂತಕ್ಕೆ ಕಾಲಿಟ್ಟಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ದಿನದಂದು ಈ ದಂಪತಿ ತಮ್ಮ ಎರಡನೇ ಮಗುವನ್ನು (ಗಂಡು ಮಗು) ಪ್ರೀತಿಯಿಂದ ಜಗತ್ತಿಗೆ ಸ್ವಾಗತಿಸಿದ್ದಾರೆ. ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತವಾಗಿ ಹಂಚಿಕೊಂಡಿದ್ದು, ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಖುಷಿಯ ಕ್ಷಣ ಹಂಚಿಕೊಂಡ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಪುಟ್ಟ ಕಂದನ…
