Halka Don: ದಸರಾ ಸಂಭ್ರಮದಲ್ಲಿ ‘ಹಲ್ಕಾ ಡಾನ್’ ಪೋಸ್ಟರ್ ರಿಲೀಸ್
ಬೆಂಗಳೂರು: ನಾಡಹಬ್ಬ ದಸರಾ ಉತ್ಸವದ ಶುಭ ಸಂದರ್ಭದಲ್ಲಿ ಸ್ಯಾಂಡಲ್ವುಡ್ ಹಾಗೂ ಕರಾವಳಿ ಚಿತ್ರರಂಗದಲ್ಲಿ ಭಾರೀ ಕುತೂಹಲ ಮೂಡಿಸಿರುವ ‘ಹಲ್ಕಾ ಡಾನ್’ (Halka Don) ಚಿತ್ರತಂಡವು ಸಿನಿಪ್ರಿಯರಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದೆ. ಪ್ರಮೋದ್ ಪಂಜು ಹಾಗೂ ಬಿಗ್ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಟನೆಯ ಈ ನೂತನ ಕನ್ನಡ-ತೆಲುಗು ದ್ವಿಭಾಷಾ ಆ್ಯಕ್ಷನ್-ಕಾಮಿಡಿ ಸಿನಿಮಾದ ಹೊಸ ಆಕರ್ಷಕ ಪೋಸ್ಟರ್ ಅನ್ನು ದಸರಾ ಹಬ್ಬದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಲನಚಿತ್ರ ಪ್ರೇಮಿಗಳ ಗಮನ ಸೆಳೆಯುತ್ತಿದೆ. ‘ಸಲಗ’ ಹಾಗೂ ‘ಟಗರು’ ಅಂತಹ…
