Big News: ಸರ್ಕಾರಿ ಹಾಜರಿ ಹಾಕಿ ಖಾಸಗಿ ಕ್ಲಿನಿಕ್‌ನಲ್ಲಿ ವೈದ್ಯಕೀಯ ಸೇವೆ? ಶಾಹಾಪುರ ಜಿಲ್ಲಾ ಮಲೇರಿಯಾ ಅಧಿಕಾರಿಯ ವಿರುದ್ಧ ಗಂಭೀರ ಆರೋಪ!
ಶಾಹಾಪುರ: ಸರ್ಕಾರಿ ಕಚೇರಿಯಲ್ಲಿ ಹಾಜರಾತಿ ದಾಖಲಿಸಿ, ಕರ್ತವ್ಯದ ಸಮಯದಲ್ಲೇ ಖಾಸಗಿ (Big News) ಕ್ಲಿನಿಕ್‌ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಶಾಹಾಪುರದ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ರಾಜಕುಮಾರ್ ಹಿತಿನಾಳ ಅವರ ವಿರುದ್ಧ ಕೇಳಿಬಂದಿದೆ. ಸರ್ಕಾರಿ ಹುದ್ದೆಯಲ್ಲಿದ್ದು ಸಾರ್ವಜನಿಕ ಸೇವೆ ಸಲ್ಲಿಸಬೇಕಾದ ಅಧಿಕಾರಿಯೊಬ್ಬರು ಕಚೇರಿ ಕರ್ತವ್ಯದ ಅವಧಿಯಲ್ಲೇ ಖಾಸಗಿ ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಆರೋಪ ಇದೀಗ ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಏನಿದು ಆರೋಪ? ಆರೋಪದ ಪ್ರಕಾರ, ಡಾ. ರಾಜಕುಮಾರ್ ಹಿತಿನಾಳ…
