FSSAI: ಹಬ್ಬಕ್ಕೂ ಮುನ್ನ ಸ್ವೀಟ್ಸ್ ಅಂಗಡಿಗಳಿಗೆ FSSAI ಶಾಕ್: ಶುಚಿತ್ವವಿಲ್ಲದಿದ್ದರೆ ಕಠಿಣ ಕ್ರಮ!
ಬೆಂಗಳೂರು: ಶ್ರಾವಣ ಮಾಸ ಮುಗಿದು ಹಬ್ಬಗಳ ಸಾಲು ಆರಂಭವಾಗುತ್ತಿದ್ದಂತೆಯೇ ರಾಜಧಾನಿಯಲ್ಲಿ ಸಿಹಿ ತಿನಿಸುಗಳು ಹಾಗೂ ಬೇಕರಿ ಉತ್ಪನ್ನಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಆದರೆ, ಸಾರ್ವಜನಿಕರಿಗೆ ಪೂರೈಕೆಯಾಗುತ್ತಿರುವ ಈ ಆಹಾರ ಪದಾರ್ಥಗಳು ಎಷ್ಟು ಸುರಕ್ಷಿತ? ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ರಂಗಕ್ಕಿಳಿದಿದ್ದಾರೆ. ನಗರದ ಹಲವು ಸ್ವೀಟ್ಸ್ ಮತ್ತು ಬೇಕರಿ ಉತ್ಪಾದನಾ ಘಟಕಗಳ ಮೇಲೆ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಪರಿಶೀಲನೆ ಚುರುಕುಗೊಳಿಸಿದೆ. ಹಬ್ಬಗಳ ಸಮಯದಲ್ಲಿ ತರಾತುರಿಯಲ್ಲಿ ಆಹಾರ…
