Drishyam 3: ಬಾಕ್ಸ್ ಆಫೀಸ್ನಲ್ಲಿ ‘ದೃಶ್ಯಂ 3’ ಆರ್ಭಟ: ಕೇವಲ 58 ಗಂಟೆಗಳಲ್ಲಿ 100 ಕೋಟಿ ಗಳಿಸಿ ಮೋಹನ್ಲಾಲ್ ಹೊಸ ದಾಖಲೆ!
ಬೆಂಗಳೂರು: ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಸಸ್ಪೆನ್ಸ್ ಥ್ರಿಲ್ಲರ್ ಸರಣಿಗಳಲ್ಲಿ ಒಂದಾದ ‘ದೃಶ್ಯಂ’ಚಿತ್ರದ ಮೂರನೇ ಭಾಗ ಬಾಕ್ಸ್ ಆಫೀಸ್ನಲ್ಲಿ ಬಿರುಗಾಳಿ ಸೃಷ್ಟಿಸಿದೆ. ಮಲಯಾಳಂ ಸೂಪರ್ ಸ್ಟಾರ್ ಮೋಹನ್ಲಾಲ್ ನಟನೆಯ ‘ದೃಶ್ಯಂ 3’ (Drishyam 3) ಸಿನಿಮಾ ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 100 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡುವ ಮೂಲಕ ಇತಿಹಾಸ ಬರೆದಿದೆ. ಚಿತ್ರಮಂದಿರಗಳತ್ತ ಪ್ರೇಕ್ಷಕರು ಪ್ರವಾಹದೋಪಾದಿಯಲ್ಲಿ ನುಗ್ಗುತ್ತಿದ್ದು, ಕೇವಲ ಮೂರು ದಿನಗಳ ವಾರಾಂತ್ಯದ ಅವಧಿಯಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಚಿತ್ರದ ಒಟ್ಟು ಗಳಿಕೆ…
