Crime: ಹೆಂಡತಿ ಮೇಲೆ ಬೊಗಳಿದ ನಾಯಿ ಜೀವ ತೆಗೆದ ಆಸಾಮಿ
ಬೆಂಗಳೂರು:ಬೆಂಗಳೂರಿನಲ್ಲಿ (Bengaluru) ಕೇವಲ ಸಣ್ಣ ಕಾರಣವೊಂದಕ್ಕಾಗಿ ನೆರೆಯ ಮನೆಯ ಮುಗ್ಧ ನಾಯಿಯೊಂದರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಹೇಯ ಘಟನೆ ಬೆಳಕಿಗೆ (Crime) ಬಂದಿದೆ. ತಮ್ಮ ಪತ್ನಿಯ ಮೇಲೆ ನಾಯಿ ಬೊಗಳಿತು ಎಂಬ ಕ್ಷುಲ್ಲಕ ಕಾರಣಕ್ಕಾಗಿ ಗೋಪಿ ಎಂಬಾತ ಮರದ ತುಂಡಿನಿಂದ ನಾಯಿಯನ್ನು ಮನಬಂದಂತೆ ಹೊಡೆದು ಗಾಯಗೊಳಿಸಿದ್ದಾನೆ. ಈ ಘಟನೆಯು ಏಪ್ರಿಲ್ 9ರಂದು ನಡೆದಿದ್ದು, ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಏನಿದು ಘಟನೆ? ಸಿಸಿಟಿವಿ ದೃಶ್ಯಗಳಲ್ಲಿ ಗೋಪಿ ನೇರವಾಗಿ ನೆರೆಯವರ ಮನೆಗೆ ನುಗ್ಗಿ, ಪ್ರವೇಶದ್ವಾರದಲ್ಲಿದ್ದ…
