DK Shivakumar: ಮೈಸೂರು ದಸರಾ ಬೆಳಕಿನ ಶೃಂಗಾರ ವೀಕ್ಷಣೆಗೆ ಮತ್ತಷ್ಟು ದಿನಗಳ ಅವಕಾಶ: ಡಿ.ಕೆ. ಶಿವಕುಮಾರ್ ಘೋಷಣೆ!
ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಅತ್ಯಾಕರ್ಷಕ ಲೈಟಿಂಗ್ಸ್ (ಬೆಳಕಿನ ಶೃಂಗಾರ) ವೀಕ್ಷಣೆಯ ಅವಧಿಯನ್ನು ಮತ್ತಷ್ಟು ದಿನಗಳ ಕಾಲ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದ್ದಾರೆ. ಈ ಕುರಿತು ಶೀಘ್ರದಲ್ಲೇ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಲೈಟಿಂಗ್ಸ್ ವೀಕ್ಷಣೆಗೆ 10 ದಿನಗಳ ಹೆಚ್ಚುವರಿ ಅವಕಾಶ ವಿಧಾನಸೌಧದಲ್ಲಿ ಆಯುಧ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ದಸರಾ ಅಂಗವಾಗಿ ನಾನು ಈಗಾಗಲೇ…
