Big News: ಸಾರಿಗೆ ಬಸ್ ದರ ಭಾರಿ ಏರಿಕೆ: ಕೆಎಸ್‌ಆರ್‌ಟಿಸಿ ಶೇ 23, ಬಿಎಂಟಿಸಿ ಶೇ 35ರಷ್ಟು ಟಿಕೆಟ್ ದರ ಹೆಚ್ಚಳ!
ಬೆಂಗಳೂರು: ರಾಜ್ಯದಲ್ಲಿ ಬಸ್ ಪ್ರಯಾಣಿಕರಿಗೆ ಸರ್ಕಾರದಿಂದ ತೀವ್ರ ಆಘಾತ ಎದುರಾಗಿದೆ. ರಾಜ್ಯದ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರಗಳನ್ನು ಗಣನೀಯವಾಗಿ ಏರಿಕೆ ಮಾಡಿ ಸರ್ಕಾರ ಆದೇಶ (Big News) ಹೊರಡಿಸಿದೆ. ನವೆಂಬರ್ ೪ ರಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಾರಿಗೆ ಸಚಿವ ಭೈರತಿ ಸುರೇಶ್ ಅವರು, ಕೆಎಸ್‌ಆರ್‌ಟಿಸಿ (KSRTC) ಮತ್ತು ಬಿಎಂಟಿಸಿ (BMTC) ಸೇರಿದಂತೆ ರಾಜ್ಯದ ಎಲ್ಲಾ ಸಾರಿಗೆ ಸಂಸ್ಥೆಗಳಲ್ಲಿ ಪರಿಷ್ಕೃತ ಟಿಕೆಟ್ ದರಗಳನ್ನು ಜಾರಿಗೆ ತರುತ್ತಿರುವುದಾಗಿ ಪ್ರಕಟಿಸಿದ್ದಾರೆ. ಈ ಹೊಸ ಪರಿಷ್ಕೃತ ದರಗಳು ಇಂದು ರಾತ್ರಿಯಿಂದಲೇ ಜಾರಿಗೆ…
