UT Khader: ಡಿಜಿಟಲ್ ಪಥದತ್ತ ಕರ್ನಾಟಕ ವಿಧಾನಮಂಡಲ: ಇನ್ಮುಂದೆ ಶಾಸಕರು ಹೈಟೆಕ್, ಕಲಾಪಕ್ಕೆ ಸಿಗಲಿದೆ ಐಪ್ಯಾಡ್ ಸ್ಪರ್ಶ!
ಮಂಗಳೂರು: ಕರ್ನಾಟಕದ ಶಾಸನಸಭೆಯ ಇತಿಹಾಸದಲ್ಲೇ ಅತ್ಯಂತ ಕ್ರಾಂತಿಕಾರಕ ಬದಲಾವಣೆಯೊಂದು ಬರಲಿದ್ದು, ಮುಂಬರುವ ಆರು ತಿಂಗಳಲ್ಲಿ ಉಭಯ ಸದನಗಳ ಕಲಾಪಗಳು ಸಂಪೂರ್ಣವಾಗಿ ಕಾಗದ ರಹಿತ (Paperless) ಆಗಲಿವೆ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ (UT Khader) ಪ್ರಕಟಿಸಿದ್ದಾರೆ. ಇನ್ಮುಂದೆ ಅಧಿವೇಶನದಲ್ಲಿ ಪಾಲ್ಗೊಳ್ಳುವ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ದಪ್ಪಗಿನ ಕಾಗದದ ಫೈಲ್ಗಳ ಬದಲಾಗಿ, ವಿಶೇಷ ಸಾಫ್ಟ್ವೇರ್ ಒಳಗೊಂಡಿರುವ ಅತ್ಯಾಧುನಿಕ ಐಪ್ಯಾಡ್ಗಳನ್ನು ಬಳಸಲಿದ್ದಾರೆ. ಈ ಹೊಸ ತಂತ್ರಜ್ಞಾನದಿಂದಾಗಿ ಪ್ರತಿವರ್ಷ ಮುದ್ರಣ ಕಾರ್ಯ ಹಾಗೂ ಸಾಗಾಟಕ್ಕಾಗಿ ಖರ್ಚಾಗುತ್ತಿದ್ದ ಕೋಟ್ಯಂತರ ರೂಪಾಯಿ…
