Ammy Virk: ಕೆನಡಾದಲ್ಲಿ ಪಂಜಾಬಿ ಗಾಯಕ ಆಮಿ ವಿರ್ಕ್ ಕಾರಿನ ಮೇಲೆ ಗುಂಡಿನ ದಾಳಿ
ಪಂಜಾಬ್: ಕೆನಡಾದ ಅಟ್ಕಾಫರ್ಡ್‌ನಲ್ಲಿ ಇತ್ತೀಚೆಗೆ ಯಶಸ್ವಿ ಸಂಗೀತ ಕಚೇರಿಯನ್ನು ಮುಗಿಸಿ ಹಿಂತಿರುಗುತ್ತಿದ್ದ ಜನಪ್ರಿಯ ಪಂಜಾಬಿ ಗಾಯಕ ಹಾಗೂ ನಟ ಆಮಿ ವಿರ್ಕ್ (Ammy Virk) ಅವರ ಬೆಂಗಾವಲು ವಾಹನದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ದೊಡ್ಡ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಅಟ್ಕಾಫರ್ಡ್ ನಗರದಲ್ಲಿ ಸೆಪ್ಟೆಂಬರ್ 5ರಂದು ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಗಾಯಕ ಸಂಚರಿಸುತ್ತಿದ್ದ ವಾಹನಗಳ ಸಾಲಿನಲ್ಲಿನ ಒಂದು ಕಾರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಅಟ್ಕಾಫರ್ಡ್ ಪೊಲೀಸ್…
