CSK: ಸಿಎಸ್‌ಕೆ ಸತತ ವೈಫಲ್ಯಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ಅಂಬಾಟಿ ರಾಯುಡು: ಹಳೆಯ ಗೆಲುವಿನ ಸೂತ್ರ ಈಗ ಕೆಲಸ ಮಾಡುತ್ತಿಲ್ಲ ಎಂದ ಮಾಜಿ ಬ್ಯಾಟರ್
ಚೆನ್ನೈ: ಐದು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಕಳೆದ ಮೂರು ಆವೃತ್ತಿಗಳಲ್ಲಿ (2024, 2025 ಮತ್ತು 2026) ಸತತವಾಗಿ ಪ್ಲೇಆಫ್ ಹಂತಕ್ಕೇರಲು ವಿಫಲವಾಗಿರುವುದು ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ. ಬಲಿಷ್ಠ ತಂಡವಾಗಿದ್ದ ಸಿಎಸ್‌ಕೆಯ ಈ ಸತತ ಹಿನ್ನಡೆಗೆ ನಿಜವಾದ ಕಾರಣವೇನು ಎಂಬುದನ್ನು ತಂಡದ ಮಾಜಿ ಸ್ಟಾರ್ ಬ್ಯಾಟರ್ ಅಂಬಾಟಿ ರಾಯುಡು (Ambati Rayudu) ಬಹಿರಂಗಪಡಿಸಿದ್ದಾರೆ. ಕಾಲಕ್ಕೆ ತಕ್ಕಂತೆ ಬದಲಾಗದಿರುವುದು ಮತ್ತು ಯುವ ಪ್ರತಿಭೆಗಳನ್ನು ಬೆಳೆಸುವ ವ್ಯವಸ್ಥೆಯನ್ನು ರೂಢಿಸಿಕೊಳ್ಳದಿರುವುದೇ ತಂಡದ ಈ ಸ್ಥಿತಿಗೆ…
