TOP NEWS
india gives strong warning to china regarding Operation Sindoor

Operation Sindoor: ಉಗ್ರರ ರಕ್ಷಣೆಗೆ ನಿಂತ ಚೀನಾಕ್ಕೆ ಭಾರತದ ಛೀಮಾರಿ: ‘ಜವಾಬ್ದಾರಿಯುತ ದೇಶಗಳ ನಡವಳಿಕೆ ಹೀಗಿರಬಾರದು’ ಎಂದ ವಿದೇಶಾಂಗ ಇಲಾಖೆ!

ನವದೆಹಲಿ: ಕಳೆದ ವರ್ಷ ನಡೆದ ‘ಆಪರೇಷನ್ ಸಿಂಧೂರ್’ (Operation Sindoor) ಕಾರ್ಯಾಚರಣೆಯ ವೇಳೆ ಪಾಕಿಸ್ತಾನಕ್ಕೆ ಚೀನಾ ತಾಂತ್ರಿಕ ನೆರವು ನೀಡಿದೆ ಎಂಬ ಮಾಹಿತಿ ಹೊರಬರುತ್ತಿದ್ದಂತೆಯೇ ಭಾರತವು ಚೀನಾಕ್ಕೆ ಕಟು ಶಬ್ದಗಳಲ್ಲಿ ಎಚ್ಚರಿಕೆ ನೀಡಿದೆ. “ತಮ್ಮನ್ನು ತಾವು ಜವಾಬ್ದಾರಿಯುತ ರಾಷ್ಟ್ರಗಳೆಂದು ಕರೆದುಕೊಳ್ಳುವವರು, ಭಯೋತ್ಪಾದನೆಯನ್ನು ಬೆಂಬಲಿಸುವ ಇಂತಹ ಕ್ರಮಗಳು ತಮ್ಮ ಜಾಗತಿಕ ಸ್ಥಾನಮಾನದ ಮೇಲೆ ಎಂತಹ ಪರಿಣಾಮ ಬೀರಬಹುದು ಎಂಬುದನ್ನು ಯೋಚಿಸಲಿ” ಎಂದು ಭಾರತ ತಿರುಗೇಟು ನೀಡಿದೆ. ಏನಿದು ಚೀನಾದ ಗುಪ್ತ ಕಾರ್ಯಾಚರಣೆ? ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದ…

Read More
war effect again indian rupee hits low

Indian Rupee: ಪ್ರಪಾತಕ್ಕೆ ಕುಸಿದ ರೂಪಾಯಿ ಮೌಲ್ಯ: ಇತಿಹಾಸದಲ್ಲೇ ಮೊದಲ ಬಾರಿಗೆ 95ರ ಗಡಿ ದಾಟಿದ ಡಾಲರ್ ಬೆಲೆ!

ಮುಂಬೈ: ಜಾಗತಿಕ ರಾಜಕೀಯ ವಿದ್ಯಮಾನಗಳು ಭಾರತೀಯ ಆರ್ಥಿಕತೆಯ ಮೇಲೆ ಆಘಾತಕಾರಿ ಪರಿಣಾಮ ಬೀರುತ್ತಿವೆ. ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಭೀತಿಯಿಂದಾಗಿ ಮಂಗಳವಾರ ಭಾರತೀಯ ರೂಪಾಯಿ (Indian Rupee) ಮೌಲ್ಯವು ಸಾರ್ವಕಾಲಿಕ ಕುಸಿತ ಕಂಡಿದೆ. ಡಾಲರ್ ಎದುರು 35 ಪೈಸೆಗಳಷ್ಟು ನೆಲಕಚ್ಚಿದ ರೂಪಾಯಿ, ಇತಿಹಾಸದಲ್ಲೇ ಮೊದಲ ಬಾರಿಗೆ 95.63 ರೂಪಾಯಿಗೆ ತಲುಪುವ ಮೂಲಕ ಆತಂಕ ಮೂಡಿಸಿದೆ. ಕುಸಿತಕ್ಕೆ ಕಾರಣವಾದ ಜಾಗತಿಕ ಸಂಘರ್ಷ ಇರಾನ್ ನೀಡಿದ್ದ ಸಂಧಾನದ ಪ್ರಸ್ತಾವನೆಯನ್ನು ಅಮೆರಿಕ ತಿರಸ್ಕರಿಸಿದ ಬೆನ್ನಲ್ಲೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಲ್ಲಣ ಶುರುವಾಗಿದೆ….

Read More
Etihad Airways flight returns after few minutes of take off fire mishap

Fire Mishap: ಎತಿಹಾದ್ ಏರ್‌ವೇಸ್ ವಿಮಾನದಲ್ಲಿ ತಾಂತ್ರಿಕ ದೋಷ, ಟೇಕಾಫ್ ಮುನ್ನವೇ ಮರಳಿದ ಫ್ಲೈಟ್‌

ಚೆನ್ನೈನಿಂದ ಅಬುಧಾಬಿಗೆ ಹೊರಡಬೇಕಿದ್ದ ಎತಿಹಾದ್ ಏರ್‌ವೇಸ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ (Fire Mishap) ಎಂಬ ಸುದ್ದಿಯನ್ನು ವಿಮಾನಯಾನ ಸಂಸ್ಥೆ ಮಂಗಳವಾರ ಅಧಿಕೃತವಾಗಿ ನಿರಾಕರಿಸಿದೆ. ತಾಂತ್ರಿಕ ಸಮಸ್ಯೆಯ ಕಾರಣದಿಂದಾಗಿ ವಿಮಾನವು ಟೇಕಾಫ್ ಆಗುವ ಮುನ್ನವೇ ಮರಳಿ ನಿಲ್ದಾಣಕ್ಕೆ ಬಂದಿದೆಯೇ ಹೊರತು, ವಿಮಾನದಲ್ಲಿ ಯಾವುದೇ ಅಗ್ನಿ ಅವಘಡ ಸಂಭವಿಸಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಸುಮಾರು 280 ಪ್ರಯಾಣಿಕರಿದ್ದ ಈ ವಿಮಾನವು ಹೊರಡಲು ಸಿದ್ಧವಾಗುತ್ತಿದ್ದಾಗ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ಗೇಟ್‌ಗೆ ವಾಪಸ್ ತರಲಾಗಿದ್ದು, ಎಲ್ಲಾ ಪ್ರಯಾಣಿಕರನ್ನು…

Read More
NEET UG 2026 paper leak exam cancelled

NEET-UG: ನೀಟ್ ಪರೀಕ್ಷೆ ರದ್ದು: ನಾಸಿಕ್‌ನಿಂದ ಹಬ್ಬಿತ್ತು ಪೇಪರ್ ಲೀಕ್ ದಂಧೆ, ಆರು ರಾಜ್ಯಗಳಲ್ಲಿ ಸಿಬಿಐ ಬಲೆ!

ನವದೆಹಲಿ: ದೇಶಾದ್ಯಂತ ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕಾಗಿ ನಡೆದಿದ್ದ ನೀಟ್ (NEET-UG) ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅಧಿಕೃತವಾಗಿ ರದ್ದುಗೊಳಿಸಿದೆ. ಮಂಗಳವಾರ ಈ ಮಹತ್ವದ ನಿರ್ಧಾರ ಹೊರಬಿದ್ದಿದ್ದು, ಪೇಪರ್ ಲೀಕ್ ಜಾಲವು ಮಹಾರಾಷ್ಟ್ರದ ನಾಸಿಕ್‌ನಿಂದ ಆರಂಭವಾಗಿ ದೇಶದ ಆರು ರಾಜ್ಯಗಳಿಗೆ ವಿಸ್ತರಿಸಿರುವ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ನಾಸಿಕ್ ಟು ಹರಿಯಾಣ: ಹೇಗೆ ಹರಡಿತು ಜಾಲ? ತನಿಖಾ ವರದಿಗಳ ಪ್ರಕಾರ, ಈ ಅಕ್ರಮ ದಂಧೆಯ ಸಂಚು ಮೊದಲು ನಾಸಿಕ್‌ನಲ್ಲಿ…

Read More
Does Indira Gandhi also urged not to buy gold as Narendra modi

Narendra Modi: ಚಿನ್ನದ ಖರೀದಿ ನಿಲ್ಲಿಸಿ ಅಂದಿದ್ದರು ಇಂದಿರಾ ಗಾಂಧಿ: ವೈರಲ್ ಆದ ಪತ್ರಿಕೆಯ ಅಸಲಿ ಸತ್ಯವೇನು?

ನವದೆಹಲಿ: ಜಾಗತಿಕ ಅನಿಶ್ಚಿತತೆ ಮತ್ತು ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇತ್ತೀಚೆಗೆ ಮಾಡಿದ್ದ “ಇಂಧನ ಉಳಿಸಿ ಮತ್ತು ಬಂಗಾರದ ಖರೀದಿ ಮುಂದೂಡಿ” ಎಂಬ ಮನವಿ ದೇಶಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ನಡುವೆ, 1967ರ ಜೂನ್ ತಿಂಗಳ ‘ದ ಹಿಂದೂ’ ಪತ್ರಿಕೆಯ ಮುಖಪುಟದ ಚಿತ್ರವೊಂದು ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಕೂಡ ಚಿನ್ನ ಖರೀದಿಸಬೇಡಿ ಎಂದು ಜನರಲ್ಲಿ ಕೋರಿದ್ದರು ಎಂಬ ವರದಿಯಿದೆ. ವೈರಲ್…

Read More
bengaluru suburban Rail new fleet to boost connectivity

Bengaluru: ಬೆಂಗಳೂರು ಉಪನಗರ ರೈಲು ಯೋಜನೆಗೆ ಆನೆಬಲ: 153 ಹವಾನಿಯಂತ್ರಿತ ಬೋಗಿಗಳ ಖರೀದಿಗೆ 1,513 ಕೋಟಿ ರೂ. ಮೊತ್ತದ ಆರ್ಡರ್!

ಬೆಂಗಳೂರು: ಬಹುನಿರೀಕ್ಷಿತ (Bengaluru) ಉಪನಗರ ರೈಲು ಯೋಜನೆಗೆ ಈಗ ಹೊಸ ವೇಗ ಸಿಕ್ಕಿದ್ದು, ರೈಲು ಬೋಗಿಗಳ ಪೂರೈಕೆಗೆ ಸಂಬಂಧಿಸಿದಂತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಕೆ-ರೈಡ್ ಸಂಸ್ಥೆಯ ಅಂಗಸಂಸ್ಥೆಯಾದ ಬಿ-ರೈಡ್, ಚೆನ್ನೈ ಮೂಲದ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಗೆ ಬರೋಬ್ಬರಿ 1,513.75 ಕೋಟಿ ರೂಪಾಯಿಗಳ ಬೃಹತ್ ಕಾರ್ಯಾದೇಶವನ್ನು ನೀಡಿದೆ. ಈ ಒಪ್ಪಂದದ ಅಡಿಯಲ್ಲಿ ಐಸಿಎಫ್ ಸಂಸ್ಥೆಯು ಮೆಟ್ರೋ ಮಾದರಿಯ 153 ಅತ್ಯಾಧುನಿಕ ಹವಾನಿಯಂತ್ರಿತ ಬೋಗಿಗಳನ್ನು ತಯಾರಿಸಿ ಪೂರೈಸಲಿದೆ. 18 ತಿಂಗಳ ಒಳಗೆ ವಿತರಣೆ ಆರಂಭ ಒಟ್ಟು…

Read More
Viral news madhyapradesh high court judge comes in cycle after narendra modi statement

Viral: ಮೋದಿ ಮಾತಿಗೆ ವಿಶೇಷ ರೀತಿ ಸ್ಪಂದನೆ, ಸೈಕಲ್‌ ಏರಿ ಬಂದ ನ್ಯಾಯಾಧೀಶರು

ಮಧ್ಯಪ್ರದೇಶ: ಇಲ್ಲಿನ ಹೈಕೋರ್ಟ್‌ನ ನ್ಯಾಯಾಧೀಶರಾದ ನ್ಯಾಯಮೂರ್ತಿ ದ್ವಾರಕಾ ಧೀಶ್ ಬನ್ಸಲ್ ಅವರು ಮಂಗಳವಾರ ಸೈಕಲ್ ತುಳಿಯುವ ಮೂಲಕ ನ್ಯಾಯಾಲಯಕ್ಕೆ (Viral) ಆಗಮಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದಿಂದಾಗಿ ಉಂಟಾಗಿರುವ ಜಾಗತಿಕ ಇಂಧನ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ ಇಂಧನ ಉಳಿತಾಯದ ಮನವಿಗೆ ಸ್ಪಂದಿಸಿ ನ್ಯಾಯಾಧೀಶರು ಈ ನಿರ್ಧಾರ ಕೈಗೊಂಡಿದ್ದಾರೆ. ಜಬಲ್‌ಪುರ ಪೀಠದಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು ಸಿವಿಲ್ ಲೈನ್ಸ್‌ನಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಸುಮಾರು…

Read More