ICC: ಬಾಂಗ್ಲಾ ನಡೆಯನ್ನ ಬೂಟಾಟಿಕೆ ಎಂದ ಐಸಿಸಿ, ಸ್ಕಾಟ್ಲೆಂಡ್‌ಗೆ ಆಡಲು ಅವಕಾಶ

ICC calls bangaldesh india stand is Hypocritical

ನವದೆಹಲಿ: ಭದ್ರತೆಯ ದೃಷ್ಟಿಯಿಂದ ಭಾರತದಲ್ಲಿ ತನ್ನ ತಂಡವನ್ನ ಬಾಂಗ್ಲಾ ಕ್ರಿಕೆಟ್‌ ಮಂಡಳಿ ಆಡಿಸಲು ನಿರಾಕರಿಸಿ, ಬೇರೆ ಸ್ಥಳ ನಿಗದಿ ಮಾಡುವಂತೆ ಮಾಡಿರುವ ಮನವಿಯನ್ನ ಐಸಿಸಿ (ICC) ನಿರಾಕರಿಸಿದೆ.

ಪರಿಶೀಲನೆ ಮಾಡಿದ ಐಸಿಸಿ

ಮಾಹಿತಿಗಳ ಪ್ರಕಾರ, ಆಂತರಿಕ ಮತ್ತು ಬಾಹ್ಯ ತಜ್ಞರೊಂದಿಗೆ ಭದ್ರತೆಯ ವಿಚಾರವಾಗಿ ಐಸಿಸಿ ಅನೇಕ ಪರಿಶೀಲನೆಗಳನ್ನ ಮಾಡಿದ್ದು, ಬಾಂಗ್ಲಾದೇಶ ಆಟಗಾರರಿಗೆ ಯಾವುದೇ ಭದ್ರತಾ ಸಮಸ್ಯೆ ಆಗುವುದಿಲ್ಲ ಎಂದು ತೀರ್ಮಾನ ಮಾಡಿ ಬಾಂಗ್ಲಾ ಕ್ರಿಕೆಟ್‌ ಮಂಡಳಿಯ ಮನವಿಯನ್ನ ನಿರಾಕರಣೆ ಮಾಡಿದೆ. ಅದರ ಜೊತೆಗೆ ಕಳೆದ ವರ್ಷ ಅತಿಯಾದ ಭದ್ರತಾ ಸಮಸ್ಯೆ ಇದ್ದರೂ ಸಹ  ಚಾಂಪಿಯನ್ಸ್ ಟ್ರೋಫಿಗಾಗಿ ಬಾಂಗ್ಲಾದೇಶ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು ಎಂಬುದನ್ನ ಐಸಿಸಿ ಗಮನಿಸಿದ್ದು, ಬಾಂಗ್ಲಾದ ಈ ನಡೆಯನ್ನ ಬೂಟಾಟಿಕೆ ಎಂದು ಟೀಕೆ ಮಾಡಿದೆ.

ಬಾಂಗ್ಲಾ ಬದಲು ಆಡಲಿದೆ ಸ್ಕಾಟ್ಲೆಂಡ್

ಬಾಂಗ್ಲಾದೇಶ ಭದ್ರತೆ ಕಾರಣ ನೀಡಿ ಭಾರತದಲ್ಲಿ ಆಡಲು ನಿರಾಕರಿಸಿರುವ ಹಿನ್ನೆಲೆಯಲ್ಲಿ  ಐಸಿಸಿ ಶನಿವಾರ ಅಧಿಕೃತವಾಗಿ ಸ್ಕಾಟ್ಲೆಂಡ್ ಅನ್ನು ಬಾಂಗ್ಲಾದೇಶದ ಬದಲಿಯಾಗಿ ಟೂರ್ನಮೆಂಟ್‌ಗೆ ಆಯ್ಕೆ ಮಾಡಿದ್ದು, ಈ ಮೂಲಕ ಬಾಂಗ್ಲಾ ನಾಟಕಕ್ಕೆ ತೆರೆ ಎಳೆದಿದೆ.

ಇದನ್ನೂ ಓದಿ: ಹ್ಯಾಂಡ್‌ಶೇಕ್ ಬಗ್ಗೆ ಅಪಹಾಸ್ಯ ಮಾಡಿದ ಪಾಕಿಸ್ತಾನ, ಪ್ರೋಮೋದಲ್ಲಿ ಭಾರತಕ್ಕೆ ಟಾಂಗ್

Leave a Reply

Your email address will not be published. Required fields are marked *