Vatal Nagaraj: ಆಗಸ್ಟ್ 13ರ ಕರ್ನಾಟಕ ಬಂದ್‌ಗೆ ಸಂಘಟನೆಗಳಲ್ಲೇ ಬಿರುಕು; ಆಟೋ ಚಾಲಕರ ತೀವ್ರ ವಿರೋಧದ ನಡುವೆಯೂ ವಾಟಾಳ್ ಹಠ!
ಹುಬ್ಬಳ್ಳಿ: ಕಾವೇರಿ, ಮಹದಾಯಿ ಹಾಗೂ ಮೇಕೆದಾಟು ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಘೋಷಿಸಿರುವ ಕರ್ನಾಟಕ ಬಂದ್‌ಗೆ ದಿನಗಣನೆ ಆರಂಭ ಬೆನ್ನಲ್ಲೇ ಒಮ್ಮತ ಮೂಡದೆ ಗೊಂದಲದ ಗೂಡಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಕಾವೇರಿ ಜಲಾನಯನ ಪ್ರದೇಶದ ನೀರಿನ ಬಿಕ್ಕಟ್ಟು ಸದ್ಯಕ್ಕೆ ತಣ್ಣಗಾಗಿರುವುದರಿಂದ ಬಂದ್ ಅನಗತ್ಯ ಎಂದು ಹಲವು ಸಂಘಟನೆಗಳು ಹಿಂದೆ ಸರಿದಿವೆ. ಆದರೆ, ಯಾರೇ ವಿರೋಧಿಸಿದರೂ ನಿಗದಿಪಡಿಸಿದಂತೆ ಇದೇ ತಿಂಗಳ 13ರಂದು ರಾಜ್ಯ ಬಂದ್ ನಡೆಸಿಯೇ ಸೀರುತ್ತೇವೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್…
