Crime: ಆಕ್ಸಿಡೆಂಟ್‌ ಮಾಡಿಸಿ ಹೆಂಡತಿ ಸಾಯಿಸಿದ ಭೂಪ, ಪೊಲೀಸರಿಗೆ ಆರೋಪಿ ಸಿಕ್ಕಿದ್ದು ಹೇಗೆ?

Crime Maharashtra Man Got His Wife Killed

ಮುಂಬೈ: ಮಹಾರಾಷ್ಟ್ರದ ಬುಲ್ದಾನದ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಆಹಾರಕ್ಕೆ ವಿಷ ಬೆರೆಸಿ ಮೂರು ಬಾರಿ ಕೊಲ್ಲಲು ಯತ್ನಿಸಿ, ವಿಫಲವಾಗಿದ್ದು ನಂತರ ಮತ್ತೆ ಪ್ಲ್ಯಾನ್‌ ಮಾಡಿ ಕೊಲೆ (Crime) ಮಾಡಿರುವ ಘಟನೆ ನಡೆದಿದೆ.

ಕಾರಿನಿಂದ ಅಪಘಾತ ಮಾಡಿಸಿದ್ದ ಆರೋಪಿ

ಪೊಲೀಸರು ನೀಡಿರುವ ಮಾಹಿತಿಗಳ ಪ್ರಕಾರ, ಯಾವಾಗ ಆ ವ್ಯಕ್ತಿ ತನ್ನ ಹೆಂಡತಿಯ ಕೊಲೆ ಮಾಡಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲ ಆಯಿತೋ ಆಗ ಆತ  1 ಲಕ್ಷಕ್ಕೆ ಸುಪಾರಿ ಕೊಟ್ಟು ಅಪಘಾತ ಎನ್ನುವ ರೀತಿ ಆಕೆಯ ಕೊಲೆ ಮಾಡಿಸಿದ್ದಾನೆ. ಪ್ರಕಾಶ್ ಗವಾಂಡೆ ಎಂದು  ಆರೋಪಿಯನ್ನ ಗುರುತಿಸಲಾಗಿದೆ, ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ತನ್ನ ಪತ್ನಿ ವೃಶಾಲಿಯನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದ ಎನ್ನಲಾಗಿದೆ.

ಮಾರ್ಚ್ 2 ರಂದು ಈ ಘಟನೆ ನಡೆದಿದ್ದು, ಸ್ಕೂಟರ್‌ನಲ್ಲಿ ಬರುತ್ತಿದ್ದ ಮೃತ ಮಹಿಳೆಗೆ, ಬಿಳಿ ಬಣ್ಣದ ಟಾಟಾ ಇಂಟ್ರಾ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಅವರು ರಸ್ತೆಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದರು. ಆರಂಭದಲ್ಲಿ, ಅಪಘಾತದಂತೆ ಕಂಡುಬಂದಿತು. ಆದರೆ ತನಿಖೆಯ ಸಮಯದಲ್ಲಿ, ಆ ಮಹಿಳೆಯ ಬಳಿ ಸುಳಿದಾಡುತ್ತಿದ್ದ MH 28 BB 5753 ನಂಬರ್ ಪ್ಲೇಟ್ ಹೊಂದಿರುವ ಟಾಟಾ ಇಂಟ್ರಾ ಕಾರಿನ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿತು.ಆ ಕಾರು ಮನೀಶ್ ಸೂರ್ಯವಂಶಿ ಎಂಬ ವ್ಯಕ್ತಿಗೆ ಸೇರಿದ್ದು ಎಂದು ತಿಳಿದುಬಂದಿದೆ  ನಂತರ ಆತನನ್ನು ಬಂಧಿಸಲಾಯಿತು.

1 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದ ಭೂಪ

ವಿಚಾರಣೆಯ ಸಮಯದಲ್ಲಿ, ಸೂರ್ಯವಂಶಿ ಪತಿ ಮಾಡಿದ ಕೊಲೆಗೆ ಸಂಚು ರೂಪಿಸಿದ್ದನ್ನು ಬಹಿರಂಗಪಡಿಸಿದ್ದು, ಈ ಮೂಲಕ ಆರೋಪಿ ಸಿಕ್ಕಿ ಹಾಕಿಕೊಂಡಿದ್ದಾನೆ. ತನ್ನ ಪತ್ನಿಯನ್ನು ಕೊಲ್ಲಲು ಪ್ರಕಾಶ್ ಮಂಗೇಶ್,  ಚುಲ್ಕರ್ ಎಂಬಾತನನ್ನು 1 ಲಕ್ಷ ರೂ.ಗೆ ನೇಮಿಸಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಇದನ್ನೂ ಓದಿ: ಮೈಸೂರಿನಲ್ಲಿ ಕಳವು ಪ್ರಕರಣ ಭೇದಿಸಿದ ಪೊಲೀಸರು, ಮಾಲೀಕರಿಗೆ ವಸ್ತುಗಳ ಹಸ್ತಾಂತರ

Leave a Reply

Your email address will not be published. Required fields are marked *