ನವದೆಹಲಿ: ಶುಕ್ರವಾರ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಎಲೈಟ್ ಗ್ರೂಪ್ ಸಿ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿಸುವ ಮೂಲಕ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ (Sarfaraz Khan) ಎಲ್ಲಾ ಟೀಕೆಗಳಿಗೆ ಉತ್ತರ ನೀಡಿದ್ದಾರೆ.
ದ್ವಿಶತಕ ಬಾರಿಸಿದ ಸರ್ಫರಾಜ್ ಖಾನ್
ಇಂದು ಮುಂಬೈ ಪರ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ 206 ಎಸೆತಗಳಲ್ಲಿ ದ್ವಿಶತಕ ಬಾರಿಸಿದರು. ಸರ್ಫರಾಜ್ ತಮ್ಮ ವೃತ್ತಿಜೀವನದ ಐದನೇ ಪ್ರಥಮ ದರ್ಜೆ ದ್ವಿಶತಕ ದಾಖಲಿಸಿದ್ದು, ಅಂತಿಮವಾಗಿ 219 ಎಸೆತಗಳಲ್ಲಿ 227 ರನ್ ಗಳಿಸಿ ಔಟ್ ಆಗಿದ್ದಾರೆ. ಅವರು ತಮ್ಮ ಇನಿಂಗ್ಸ್‌ನಲ್ಲಿ 19 ಬೌಂಡರಿಗಳು ಮತ್ತು ಒಂಬತ್ತು ಸಿಕ್ಸರ್‌ಗಳು 103.65 ಸ್ಟ್ರೈಕ್ ರೇಟ್‌ನಲ್ಲಿ ಆಟ ಆಡಿದ್ದಾರೆ, ಇದರಲ್ಲಿ ಭಾರತದ ವೇಗಿ ಮತ್ತು ಹೈದರಾಬಾದ್ ನಾಯಕ ಮೊಹಮ್ಮದ್ ಸಿರಾಜ್ ಕೇವಲ 39 ಎಸೆತಗಳಲ್ಲಿ 45 ರನ್ ಗಳಿಸಿದ್ದಾರೆ.
ಮತ್ತೆ ಭಾರತ ತಂಡ ಸೇರ್ತಾರಾ ಸರ್ಫರಾಜ್ ಖಾನ್?
ಇನ್ನು ಸರ್ಫರಾಜ್ ಕೊನೆಯ ಬಾರಿಗೆ 2024 ರ ನವೆಂಬರ್‌ನಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಆಡಿದ್ದರು, ಅದರ ನಂತರ ಅವರ ಫಾರ್ಮ್ ಕಳಪೆ ಇದ್ದ ಕಾರಣ ಅವರನ್ನ ಭಾರತ ತಂಡದಿಂದ ದೂರ ಇಡಲಾಗಿತ್ತು. ಆದರೆ ಈಗ ಅವರು ಮತ್ತೆ ಮರಳಿ ಫಾರ್ಮ್‌ಗೆ ಬಂದಿದ್ದು, ಭಾರತ ತಂಡಕ್ಕೆ ಮರಳಿ ಬರಲಿದ್ದಾರಾ ಎನ್ನುವ ಪ್ರಶ್ನೆ ಎದುರಾಗಿದೆ.
ಇದನ್ನೂ ಓದಿ: ಹ್ಯಾಂಡ್‌ಶೇಕ್ ಬಗ್ಗೆ ಅಪಹಾಸ್ಯ ಮಾಡಿದ ಪಾಕಿಸ್ತಾನ, ಪ್ರೋಮೋದಲ್ಲಿ ಭಾರತಕ್ಕೆ ಟಾಂಗ್
