PM Kisan: ಪಿಎಂ ಕಿಸಾನ್ ಸಮ್ಮಾನ್ 22 ಕಂತಿನ ಹಣ ಬಿಡುಗಡೆ

PM kisan samman nidhi amount released by Narendra modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂನ ಗುವಾಹಟಿಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ (PM Kisan) ನಿಧಿಯ 22ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದರು.

18,640 ಕೋಟಿ ಬಿಡುಗಡೆ

ಒಟ್ಟು 18,640 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದ್ದು, ತಲಾ 2 ಸಾವಿರ ರೂಪಾಯಿಯಂತೆ ದೇಶದ ಸುಮಾರು 9.32 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (DBT) ಮೂಲಕ ಹಣ ಜಮೆಯಾಗಿದೆ.  ಈ ಯೋಜನೆಯಡಿ ಇದುವರೆಗೆ ರೈತರಿಗೆ ಒಟ್ಟು 4.09 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ವರ್ಗಾಯಿಸಿದಂತಾಗಿದೆ.

22 ಕಂತು ಪೂರೈಕೆ

ಕೇಂದ್ರ ಸರ್ಕಾರವು ಪ್ರತಿ ವರ್ಷ ರೈತರಿಗೆ ಮೂರು ಕಂತುಗಳಲ್ಲಿ ಒಟ್ಟು 6 ಸಾವಿರ ರೂಪಾಯಿಗಳ ಧನಸಹಾಯ ನೀಡುತ್ತಿದ್ದು, ಯಶಸ್ವಿಯಾಗಿ 22 ಕಂತುಗಳನ್ನು ಪೂರೈಸಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.

ಇದನ್ನೂ ಓದಿ: ರಾಜ್ಯದಲ್ಲಿ ಹೂಡಿಕೆ ಹೆಚ್ಚಳ: ಎಂಬಿ ಪಾಟೀಲ್‌

Leave a Reply

Your email address will not be published. Required fields are marked *