Priyank Kharge: ಆರ್‌ಎಸ್‌ಎಸ್ ವಿರುದ್ಧ ಪ್ರಿಯಾಂಕ್ ಖರ್ಗೆ ಹೊಸ ಸಮರ: ಶತಮಾನೋತ್ಸವದ ಬೆನ್ನಲ್ಲೇ ಮೋಹನ್ ಭಾಗವತ್‌ಗೆ 8 ಪ್ರಶ್ನೆಗಳ ಪತ್ರ!
ಬೆಂಗಳೂರು: ರಾಜ್ಯದ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ(Priyank Kharge) ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಿರುದ್ಧ ತಮ್ಮ ರಾಜಕೀಯ ವಾಗ್ದಾಳಿಯನ್ನು ತೀವ್ರಗೊಳಿಸಿದ್ದಾರೆ. ಈ ಹಿಂದಿನ ಸಿದ್ದರಾಮಯ್ಯ ಸಂಪುಟದಲ್ಲೂ ಆರ್‌ಎಸ್‌ಎಸ್ ಸಿದ್ಧಾಂತಗಳನ್ನು ಕಟುವಾಗಿ ವಿರೋಧಿಸುತ್ತಿದ್ದ ಖರ್ಗೆ, ಈಗ ಇಲಾಖೆಯ ಉಸ್ತುವಾರಿ ಸಿಗುತ್ತಿದ್ದಂತೆ ಸಂಘದ ಮುಖ್ಯಸ್ಥರಾದ (ಸರಸಂಘಚಾಲಕ) ಮೋಹನ್ ಭಾಗವತ್ ಅವರಿಗೆ ಪತ್ರವೊಂದನ್ನು ಬರೆಯುವ ಮೂಲಕ ನೇರ ಸವಾಲು ಹಾಕಿದ್ದಾರೆ. ಸಂಘಟನೆಯು ಯಶಸ್ವಿಯಾಗಿ 100 ವರ್ಷಗಳನ್ನು ಪೂರೈಸಿರುವುದಕ್ಕೆ ಪತ್ರದಲ್ಲಿ ಶುಭ ಹಾರೈಸುತ್ತಲೇ, ಅದರ ಕಾನೂನಾತ್ಮಕ…
