Viral Video: ಕಾರಿನಿಂದ ಮಹಿಳೆಗೆ ಫ್ಲೈಯಿಂಗ್‌ ಕಿಸ್‌ ಕೊಟ್ಟ ಭೂಪ ಅರೆಸ್ಟ್

Viral video Noida Man arrested for giving Flying Kisses To Women

ಉತ್ತರ ಪ್ರದೇಶ: ವ್ಯಕ್ತಿಯೊಬ್ಬ ಕಾರು ಚಲಾಯಿಸುತ್ತಾ, ಇನ್ನೊಂದು ಕಾರಿನಲ್ಲಿ ಕುಳಿತಿದ್ದ ಮಹಿಳೆಯರ ಕಡೆಗೆ ಅಶ್ಲೀಲ ಸನ್ನೆ ಮಾಡುತ್ತಿರುವ ವಿಡಿಯೋ ವೈರಲ್ (Viral Video) ಆಗಿದ್ದು, ಮತ್ತೊಮ್ಮೆ ಮಹಿಳೆಯರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಉತ್ತರ ಪ್ರದೇಶದಲ್ಲಿ ನಡೆದ ಘಟನೆ

ಉತ್ತರ ಪ್ರದೇಶದ ನೋಯ್ಡಾದಲ್ಲಿ ಈ ಘಟನೆ ನಡೆದಿದ್ದು,  ಮಹಿಳೆಯೊಬ್ಬರು ವಿಡಿಯೋ ಮಾಡಿದ್ದಾರೆ. 17 ಸೆಕೆಂಡುಗಳ ವೀಡಿಯೊವು ಕೆಂಪು ಬಣ್ಣದ MG ಹೆಕ್ಟರ್ SUV ಯ ಚಾಲಕನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಪಕ್ಕದ ಕಾರಿನಲ್ಲಿರುವ ಮಹಿಳೆಯರಿಗೆ ಫ್ಲೈಯಿಂಗ್ ಕಿಸಸ್ ನೀಡುವುದನ್ನ ನೋಡಬಹುದಾಗಿದೆ. ಅಲ್ಲದೇ,  ನಂತರ ಆ ವ್ಯಕ್ತಿ ಅವರತ್ತ ಕೈ ಬೀಸುತ್ತಾನೆ. ಅಲ್ಲದೇ, ಆರೋಪಿಯು ಮಹಿಳೆಯರನ್ನು ಬಹಳ ಹೊತ್ತಿನಿಂದ ಹಿಂಬಾಲಿಸುತ್ತಿದ್ದ ಎನ್ನಲಾಗಿದೆ.

ಆರೋಪಿ ಬಂಧನ

ವಿಡಿಯೋ ವೈರಲ್ ಆದ ನಂತರ, ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ನೋಯ್ಡಾ ಸೆಕ್ಟರ್ 135 ರ ನಿವಾಸಿಗಳಾದ ಇಬ್ಬರು ಆರೋಪಿಗಳನ್ನು ಬಂಧಿಸಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ವ್ಯಾಲೆಂಟೈನ್ಸ್‌ ಡೇ ಬದಲು ಹನುಮಾನ ಚಾಲೀಸ ಪಾರಾಯಣ ಮಹಾಯಜ್ಞ, ಗಣಪತಿ ಸಚ್ಚಿದಾನಂದ ಆಶ್ರಮದಿಂದ ವಿಶೇಷ ಕಾರ್ಯ

Leave a Reply

Your email address will not be published. Required fields are marked *