Jr NTR: ಅಭಿಮಾನಿಗಳ ನಡೆಗೆ ಜೂನಿಯರ್ ಎನ್‌ಟಿಆರ್ ಕಚೇರಿ ಸ್ಪಷ್ಟನೆ; ರಾಜಕೀಯ ಎಂಟ್ರಿ ಊಹಾಪೋಹಗಳಿಗೆ ತೆರೆ
ಹೈದರಾಬಾದ್: ತೆಲುಗಿನ ಖ್ಯಾತ ನಟ ಜೂನಿಯರ್ ಎನ್‌ಟಿಆರ್ ಅವರ ಕುಟುಂಬಕ್ಕೆ ಆಂಧ್ರಪ್ರದೇಶದ ರಾಜಕೀಯದೊಂದಿಗೆ ದಶಕಗಳ ಅವಿನಾಭಾವ ಸಂಬಂಧವಿದೆ. ಹೀಗಾಗಿಯೇ ಅವರ ಅಭಿಮಾನಿಗಳು ಇತ್ತೀಚೆಗೆ ಘೋಷಿಸಿದ ಕಾರ್ಯಕ್ರಮವೊಂದು ನಟನ ರಾಜಕೀಯ ಪ್ರವೇಶದ ವದಂತಿಗಳಿಗೆ ಕಾರಣವಾಗಿತ್ತು. ಆದರೆ, ಈ ಕುರಿತು ಜೂನಿಯರ್ ಎನ್‌ಟಿಆರ್ (Jr NTR) ಅವರ ಕಚೇರಿ ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ. ‘ರಾ ಎನ್‌ಟಿಆರ್’ (Raw NTR) ಎಂಬ ಸಂಘಟನೆಯು ಹಮ್ಮಿಕೊಂಡಿರುವ ‘ಊರು ವಾಡಾ’ (Ooru Vaada) ಎಂಬ ಮುಂಬರುವ ಕಾರ್ಯಕ್ರಮಕ್ಕೂ…
