TOP NEWS
Karnataka Govt Approves Kambala Event for Mysuru Dasara Minister Dr Yathindra Siddaramaiah

Mysuru Dasara: ಮೈಸೂರು ದಸರಾಗೆ ಕರಾವಳಿ ಕಂಬಳದ ರಂಗು: ಅಕ್ಟೋಬರ್ 18ರಿಂದ ಅಹೋರಾತ್ರಿ ಜಾನಪದ ಕ್ರೀಡಾ ವೈಭವ!

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯಲಿರುವ ವಿಶ್ವವಿಖ್ಯಾತ ದಸರಾ (Mysuru Dasara) ಮಹೋತ್ಸವಕ್ಕೆ ಈ ಬಾರಿ ಹೊಸ ಮೆರಗು ಹಾಗೂ ವಿಶೇಷ ಆಕರ್ಷಣೆ ತರಲು ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಕರಾವಳಿ ಭಾಗದ ಅತ್ಯಂತ ಜನಪ್ರಿಯ ಹಾಗೂ ಸಾಂಪ್ರದಾಯಿಕ ಕ್ರೀಡೆಯಾದ ‘ಕಂಬಳ’ವನ್ನು ಈ ಬಾರಿಯ ದಸರಾದಲ್ಲಿ ಅದ್ಧೂರಿಯಾಗಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಘೋಷಿಸಿದ್ದಾರೆ. ಅಕ್ಟೋಬರ್‌ 18 ರಂದು ಕ್ರೀಡಾಕೂಟ ಆಯೋಜನೆ…

Read More
Dasara Kambala Row FIR Against Sports Officer Over Illegal Tree Cutting in Mysuru

Kambala: ಮೈಸೂರು ಕಂಬಳಕ್ಕೆ ಮತ್ತೊಂದು ಕಂಟಕ: ಅನುಮತಿಯಿಲ್ಲದೆ 25 ಮರಗಳ ಮಾರಣಹೋಮ; ಅರಣ್ಯ ಇಲಾಖೆ ಬಿಗಿ ಕ್ರಮ

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಕಂಬಳ (Kambala) ಕ್ರೀಡಾಕೂಟಕ್ಕೆ ವಿವಾದಗಳ ಬೆನ್ನಲ್ಲೇ ಈಗ ಮತ್ತೊಂದು ಹೊಸ ಕಾನೂನು ಸಂಕಷ್ಟ ಎದುರಾಗಿದೆ. ಕಂಬಳದ ಟ್ರ್ಯಾಕ್ ನಿರ್ಮಾಣಕ್ಕಾಗಿ ಮೈಸೂರಿನ ಸಾತಗಳ್ಳಿ ಪ್ರದೇಶದಲ್ಲಿ ಜಾಗವನ್ನು ಸಿದ್ಧಪಡಿಸುವ ವೇಳೆ, ಯಾವುದೇ ಮುನ್ಸೂಚನೆ ಹಾಗೂ ಪೂರ್ವಾನುಮತಿ ಇಲ್ಲದೆ ಕಾನೂನುಬಾಹಿರವಾಗಿ ಮರಗಳನ್ನು ಕತ್ತರಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಮೂವರ ವಿರುದ್ಧ ಎಫ್‌ಐಆರ್‌ ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಕಠಿಣ ಕ್ರಮ ಜರುಗಿಸಿದ್ದು, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರು (ಡಿಡಿ) ಸೇರಿದಂತೆ ಒಟ್ಟು…

Read More
Row over proposal to hold Kambala at Mysuru Dasara Prathap Simha backs MP Yaduveer opposition

Pratap Simha: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ತೀವ್ರ ವಿರೋಧ: ಸಂಸದ ಯದುವೀರ್ ನಿಲುವಿಗೆ ಪ್ರತಾಪ್ ಸಿಂಹ ಬೆಂಬಲ!

ಮೈಸೂರು: ಕರಾವಳಿ ಭಾಗದ ಹೆಮ್ಮೆಯ ಸಾಂಸ್ಕೃತಿಕ ಹಾಗೂ ಜಾನಪದ ಕ್ರೀಡೆಯಾದ ಕಂಬಳ ಇದೀಗ ದೇಶಾದ್ಯಂತ ಜನಪ್ರಿಯತೆ ಗಳಿಸಿದೆ. ಆದರೆ, ಮುಂಬರುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸುವ ಸರ್ಕಾರದ ಪ್ರಸ್ತಾವನೆಗೆ ಮೈಸೂರು ರಾಜಕೀಯ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಪರ-ವಿರೋಧದ ಚರ್ಚೆಗಳು ರಾಜಕೀಯ ತಿರುವು ಪಡೆದುಕೊಂಡಿವೆ. ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಅವರು ದಸರಾ ಮಹೋತ್ಸವಕ್ಕೆ ಕಂಬಳದ ಅಗತ್ಯವಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ. ‘ದಸರಾ ಪರಂಪರೆಗೆ ಕಂಬಳ ತುರುಕುವುದು ಬೇಡ’: ಮೈಸೂರಿನಲ್ಲಿ…

Read More
Row over Kambala at Mysuru Dasara MP Yaduveer opposes move

Mysuru Dasara: ಮೈಸೂರು ದಸರಾದಲ್ಲಿ ‘ಕಂಬಳ’ ಜಿದ್ದಾಜಿದ್ದಿ: ಸಂಸದ ಯದುವೀರ್ ವಿರೋಧ, ಮನವೊಲಿಕೆಗೆ ಶಾಸಕ ಅಶೋಕ್ ರೈ ಕಸರತ್ತು!

ಮೈಸೂರು: ಕರಾವಳಿಯ ಸಾಂಪ್ರದಾಯಿಕ ಕೆಸರುಗದ್ದೆ ಕ್ರೀಡೆಯಾದ ‘ಕಂಬಳ’ ಇದೀಗ ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವದಲ್ಲಿ ಆಯೋಜನೆಗೊಳ್ಳುವ ಮುನ್ನವೇ ಭಾರಿ ವಿವಾದಕ್ಕೆ ಕಾರಣವಾಗಿದೆ. ‘ಕಾಂತಾರ’ ಸಿನಿಮಾದ ಯಶಸ್ಸಿನ ಬಳಿಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ತುಳುನಾಡಿನ ಈ ವೈಭವವನ್ನು, ಇದೇ ಮೊದಲ ಬಾರಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪರಿಚಯಿಸಲು ವೇದಿಕೆ ಸಿದ್ಧವಾಗುತ್ತಿತ್ತು. ಆದರೆ, ಇದಕ್ಕೆ ಮೈಸೂರು ರಾಜಮನೆತನ ಹಾಗೂ ಸ್ಥಳೀಯ ನಾಯಕರಿಂದಲೇ ಆಕ್ಷೇಪ ವ್ಯಕ್ತವಾಗಿರುವುದು ಈಗ ಹೊಸ ಸಂಚಲನ ಮೂಡಿಸಿದೆ. ದಸರಾ ಪ್ರಯುಕ್ತ ಎರಡು ದಿನಗಳ…

Read More