T20 World Cup: ಭಾರತ್-ಪಾಕ್‌ ಮ್ಯಾಚ್‌ಗೆ ಮಳೆ ಅಡ್ಡಿ?

T20 World Cup india pak match Weather could play X-factor

ಕೊಲಂಬೊ: ಐಸಿಸಿ ಪುರುಷರ ಟಿ20 ವಿಶ್ವಕಪ್ (T20 World Cup) 2026 ರ ಮೂರನೇ ಪಂದ್ಯದಲ್ಲಿ ಭಾರತ, ಭಾನುವಾರ ಫೆಬ್ರವರಿ 15 ರಂದು ಪಾಕಿಸ್ತಾನ ವಿರುದ್ಧ ಸೆಣಸಲಿದೆ.

ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ?

ಇನ್ನು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುವ ಬಹುನಿರೀಕ್ಷಿತ ವಿಶ್ವಕಪ್ ಪಂದ್ಯದ ಸಮಯದಲ್ಲಿ ಮಳೆ ಬರುವ ಸಾಧ್ಯತೆ ಇದೆ ಅಕ್ಯೂವೆದರ್ ಪ್ರಕಾರ, ಭಾನುವಾರ ಕೊಲಂಬೊದಲ್ಲಿ 100% ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಮಳೆಯಾಗುವ ಸಾಧ್ಯತೆ ಸರಿಸುಮಾರು 13% ಇದೆ ಎನ್ನಲಾಗಿದೆ.

ಭಾರತ vs ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯವು ಸ್ಥಳೀಯ ಸಮಯ ಸಂಜೆ 7:00 ಗಂಟೆಗೆ ಪ್ರಾರಂಭವಾಗಲಿದ್ದು, ಟಾಸ್ ಅನ್ನು ಸಂಜೆ 6:30 ಕ್ಕೆ ನಿಗದಿಪಡಿಸಲಾಗಿದೆ, ಗಮನಾರ್ಹವಾಗಿ, ಸಂಜೆ 6:00 ಗಂಟೆಗೆ, ಪಂದ್ಯಕ್ಕೆ ಒಂದು ಗಂಟೆ ಮೊದಲು, ಕೊಲಂಬೊ ಮಳೆಯಾಗುವ ಸಾಧ್ಯತೆ 49% ಇದೆ.

ಶೇ. 9 ರಷ್ಟು ಮಳೆ ಸಾಧ್ಯತೆ

ಇನ್ನು ಸಂಜೆ 7 ಗಂಟೆಗೆ, ಅಕ್ಯೂವೆದರ್ ಕೊಲಂಬೊದಲ್ಲಿ ಶೇ. 9 ರಷ್ಟು ಮಳೆಯಾಗುವ ಸಾಧ್ಯತೆ ಮತ್ತು ಶೇ. 100 ರಷ್ಟು ಮೋಡ ಕವಿದ ವಾತಾವರಣ ಇರುತ್ತದೆ ಎಂದು ಮುನ್ಸೂಚನೆ ನೀಡಿದೆ. ಸ್ಥಳೀಯ ಸಮಯ ರಾತ್ರಿ 11:00 ಗಂಟೆಯವರೆಗೆ ಪರಿಸ್ಥಿತಿ ಇದೇ ರೀತಿ ಇರುತ್ತದೆ ಎಂದು ಹೇಳಲಾಗುತ್ತಿದೆ. ಪಂದ್ಯ ಮಳೆಯಿಂದ ರದ್ದಾದರೆ, ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗುತ್ತದೆ.

ಇದನ್ನೂ ಓದಿ: ಭಾರತ vs ನಮೀಬಿಯಾ ಟೀ20 ಪಂದ್ಯ, ಆಟದಿಂದ ಅಭಿಷೇಕ್‌ ಶರ್ಮಾ ಔಟ್‌

Leave a Reply

Your email address will not be published. Required fields are marked *