TOP NEWS

‌Sagara: ನಾಳೆ ತುಮರಿಯಲ್ಲಿ ಹವ್ಯಕ ಸಮಾಜ ಬಾಂಧವರಿಗಾಗಿ ವಿಶೇಷ ‘ಪ್ರತಿಬಿಂಬ’ ಕಾರ್ಯಕ್ರಮ ಆಯೋಜನೆ

Sagara havyaka pratibimba function tomorrow

ಸಾಗರ: ತಾಲ್ಲೂಕಿನ ತುಮರಿ ಸಮೀಪದ ಹುಲ್ಕೋಡಿನ ಶ್ರೀ ಭಾರತಿ ವಿದ್ಯಾನಿಕೇತನ ಪ್ರೌಢಶಾಲೆಯಲ್ಲಿ ನಾಳೆ (ಭಾನುವಾರ) ಹವ್ಯಕ ಸಮಾಜ ಬಾಂಧವರಿಗಾಗಿ ‘ಪ್ರತಿಬಿಂಬ’(Sagara) ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ

ಶ್ರೀ ಅಖಿಲ ಹವ್ಯಕ ಮಹಾಸಭಾ ವತಿಯಿಂದ ಹೊಸನಗರ ಪ್ರಾಂತ್ಯದ ಒಳಪಡುವ ಎಲ್ಲಾ ಹವ್ಯಕ ಬಂಧುಗಳಿಗಾಗಿ ಈ ವಿಶಿಷ್ಟ ವೇದಿಕೆಯನ್ನು ಸಿದ್ಧಪಡಿಸಲಾಗಿದ್ದು, ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ವಿವಿಧ ಚಟುವಟಿಕೆಗಳೊಂದಿಗೆ ಇಡೀ ದಿನ ಕಾರ್ಯಕ್ರಮ ಜರುಗಲಿದೆ.

ಹವ್ಯಕ ಸಮುದಾಯದ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮತ್ತು ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಮುಖ್ಯವಾಗಿ ‘ಸ್ಪರ್ಧಾ ಸೌರಭ’, ಹವ್ಯಕ ಶೈಲಿಯ ವೈವಿಧ್ಯಮಯ ಅಡುಗೆಗಳ ಪ್ರದರ್ಶನ ಒಳಗೊಂಡ ‘ಪಾಕೋತ್ಸವ’, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಹಿರಿಯರಿಗೆ ‘ಸಾಧಕ ಸನ್ಮಾನ’ ಹಾಗೂ ಸಮಾಜ ಬಾಂಧವರಿಂದ ‘ಸಾಂಸ್ಕೃತಿಕ ವೈಭವ’ ಎಂಬ ನಾಲ್ಕು ಪ್ರಮುಖ ಆಯಾಮಗಳನ್ನಿಟ್ಟುಕೊಂಡು ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಹೊಸನಗರ ಪ್ರಾಂತ್ಯದ ಪ್ರತಿಯೊಬ್ಬ ಹವ್ಯಕ ಬಂಧುಗಳು ಮತ್ತು ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ವರದಿ: ಪ್ರಶಾಂತ್‌ ಭಟ್

ಇದನ್ನೂ ಓದಿ:  ‘ಅತ್ಯಮೂಲ್ಯ ಸಮಯ ರಕ್ಷಕರುʼ ಕುರಿತು ತರಬೇತಿ, ಅಪೋಲೋದಿಂದ ವಿಶೇಷ ಕಾರ್ಯ

Leave a Reply

Your email address will not be published. Required fields are marked *