Viral Video: ಭಜನಾ ಗಾಯಕನ ಮೇಲೆ ನೋಟುಗಳ ಮಳೆ! ಬ್ಯಾಗ್ ಮತ್ತು ಚೀಲಗಳಲ್ಲಿ ಹಣ ತಂದು ಸುರಿದ ಭಕ್ತರು
ಜುನಾಗಢ: ಭಕ್ತಿ ಮತ್ತು ಸಂಭ್ರಮದ ಹೆಸರಿನಲ್ಲಿ ಭಕ್ತರು ನೋಟುಗಳ ಮಳೆಯನ್ನೇ (Viral Video) ಸುರಿಸಿರುವ ಅಪರೂಪದ ಘಟನೆಯೊಂದು ಗುಜರಾತ್‌ನ ಜುನಾಗಢ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಖಂಭಾಲಿಯಾದಲ್ಲಿ ಆಯೋಜಿಸಲಾಗಿದ್ದ ‘ಭಾಗವತ್ ಜ್ಞಾನ ಯಜ್ಞ’ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ನಡೆದ ಪ್ರಸಿದ್ಧ ಭಜನಾ ಗಾಯಕ ಕವಿರಾಜ್ ಜಿಗ್ನೇಶ್ ಅವರ ‘ದಾಯರೋ’ (ಗುಜರಾತಿ ಜಾನಪದ ಗಾಯನ) ಪ್ರದರ್ಶನದ ವೇಳೆ ಈ ದೃಶ್ಯ ಕಂಡುಬಂದಿದೆ. ಗಾಯಕ ಕೃಷ್ಣನ ಭಜನೆಗಳನ್ನು ಹಾಡುತ್ತಿದ್ದಂತೆ ಮೈಮರೆತ ಭಕ್ತರು, ಅಕ್ಷರಶಃ ವೇದಿಕೆಯ ಮೇಲೆ ಹಣದ ರಾಶಿಯನ್ನೇ ಸೃಷ್ಟಿಸಿದ್ದಾರೆ. ಏನಿದೆ…
