Bigg Boss: ಸೆಲೆಬ್ರಿಟಿಗಳ ಸೆಲೆಕ್ಷನ್ ಸೀಕ್ರೆಟ್ ಬಿಚ್ಚಿಟ್ಟ ಕಿಚ್ಚ: ಬಿಗ್ ಬಾಸ್ 13 ಪ್ರೆಸ್‌ಮೀಟ್‌ನಲ್ಲಿ ಸುದೀಪ್ ಖಡಕ್ ಕ್ಲಾರಿಟಿ!
ಬೆಂಗಳೂರು: ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ (Bigg Boss) ಕನ್ನಡ ಸೀಸನ್ 13’ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ನಡುವೆ ಆಯೋಜಿಸಲಾಗಿದ್ದ ವಿಶೇಷ ಮಾಧ್ಯಮಗೋಷ್ಠಿಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಜನರಲ್ಲಿದ್ದ ದೊಡ್ಡ ಅನುಮಾನಗಳಿಗೆ ಮುಕ್ತವಾಗಿ ಸ್ಪಷ್ಟನೆ ನೀಡಿದ್ದಾರೆ. ಪ್ರತಿ ಸೀಸನ್‌ನಲ್ಲೂ ಸಾಮಾನ್ಯ ಸ್ಪರ್ಧಿಗಳಿಗೆ ‘ಅಗ್ನಿಪರೀಕ್ಷೆ’ ಅಥವಾ ವಿವಿಧ ಹಂತದ ಸಂದರ್ಶನಗಳನ್ನು ನಡೆಸಿ, ಅದನ್ನು ವಾಹಿನಿಯಲ್ಲಿ ಪ್ರಸಾರ ಮಾಡಲಾಗುತ್ತದೆ. ಆದರೆ ಸೆಲೆಬ್ರಿಟಿ…
