Pooja Hegde: ನಟನಿಗೆ ಕಪಾಳಮೋಕ್ಷ ಮಾಡಿದ್ರ ಪೂಜಾ ಹೆಗ್ಡೆ? ವೈರಲ್‌ ಸುದ್ದಿಯ ಅಸಲಿ ಸತ್ಯ ಇಲ್ಲಿದೆ

bollywood actress Pooja Hegde statement viral

ಬಾಲಿವುಡ್‌ನಲ್ಲಿ ಸಖತ್‌ ಬ್ಯುಸಿ ಇರುವ ನಟಿ ಪೂಜಾ ಹೆಗ್ಡೆ (Pooja Hegde) ತೆಲುಗು ಸಿನಿಮಾಗಳಿಂದ ಸ್ವಲ್ಪ ದೂರ ಇದ್ದರು. ಇತ್ತೀಚಿನ ದಿನಗಳಲ್ಲಿ ಯಾವುದೇ ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ವೈರಲ್‌ ಆಗುತ್ತಿರುವ ಸುದ್ದಿಯ ಪ್ರಕಾರ, ನಟಿ ತೆಲುಗು ಸಿನಿಮಾ ಮಾಡದೇ ಇರಲು ಒಂದು ದೊಡ್ಡ ಕಾರಣ ಇದೆ ಎನ್ನಲಾಗುತ್ತಿದೆ. ಆ ಕಾರಣವೇನು? ನಿಜಕ್ಕೂ ಈ ಸುದ್ದಿ ಎಷ್ಟು ಸತ್ಯ? ಇಲ್ಲಿದೆ ನೋಡಿ.

ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ನಟನಿಗೆ ಹೊಡೆದ್ರಾ ನಟಿ?

ಸದ್ಯ ಕೆಲ ದಿನಗಳಿಂದ ವೈರಲ್‌ ಆಗುತ್ತಿರುವ ಸುದ್ದಿಯ ಪ್ರಕಾರ, ಪೂಜಾ ಹೆಗ್ಡೆ ಅವರು ಪ್ಯಾನ್‌ ಇಂಡಿಯಾ ತೆಲುಗು ಸಿನಿಮಾವೊಂದನ್ನ ಮಾಡುವಾಗ ಕ್ಯಾರವಾನ್‌ಗೆ ಅನುಮತಿ ಇಲ್ಲದೇ ಬಂದು ಅಸಭ್ಯವಾಗಿ ವರ್ತನೆ ಮಾಡಿದ ನಟನಿಗೆ ಕಪಾಳಮೋಕ್ಷ ಮಾಡಿದ್ದರಂತೆ. ಹಾಗಾಗಿ ಅವರು ನಂತರ ಯಾವುದೇ ಸಿನಿಮಾ ಮಾಡಲಿಲ್ಲ ಎನ್ನಲಾಗಿದೆ.

ನಟಿ ಪೂಜಾ ಹೇಳಿದ್ದೇನು?

ಸಿನಿಮಾ ರಂಗದಲ್ಲಿ ನಾಯಕಿಯರಾಗಿ ಕೆಲಸ ಮಾಡುವಾಗ, ನಾವು ಕೆಲವು ಮುಜುಗರದ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ನಾಯಕರು ನಮ್ಮ ಅನುಮತಿಯಿಲ್ಲದೆ ಕ್ಯಾರವಾನ್‌ಗೆ ಬರುತ್ತಾರೆ. ಹಲವು ವರ್ಷಗಳ ಹಿಂದೆ, ನಾನು ಪ್ಯಾನ್ ಇಂಡಿಯಾ ಚಿತ್ರ ಮಾಡುತ್ತಿದ್ದಾಗ, ಒಬ್ಬ ನಾಯಕ ನನ್ನ ಅನುಮತಿಯಿಲ್ಲದೆ ಒಳಗೆ ಬಂದ.. ನಾನು ತಕ್ಷಣ ಅವನಿಗೆ ಕೆನ್ನೆಗೆ ಹೊಡೆದೆ. ಅದರ ನಂತರ ಆತನ ಜೊತೆ ಇನ್ನೊಂದು ಸಿನಿಮಾವನ್ನ ಮಾಡಿಲ್ಲ. ಅಲ್ಲದೇ, ಆ ಸಿನಿಮಾದ ಶೂಟಿಂಗ್‌ನಲ್ಲಿ ಭಾಗವಹಿಸಲು ಇಷ್ಟವಿಲ್ಲಸ ಕಾರಣ ಡ್ಯೂಪ್‌ ಬಳಸಿ ಶೂಟಿಂಗ್‌ ಮಾಡಲಾಗಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ನಟಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಕಳೆದ 2 ದಿನಗಳಿಂದ ಅನೇಕ ಮಾಧ್ಯಮಗಳಲ್ಲಿ ವರದಿ ಆಗುತ್ತಿದೆ.

ಇನ್ನು ಈ ಹೇಳಿಕೆಯ ವಿಚಾರವಾಗಿ ನಟಿ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ, ಆದರೆ ಆಕೆಯ ತಂಡ ಈ ಬಗ್ಗೆ ಮಾತನಾಡಿದ್ದು, ಪೂಜಾ ಹೆಗ್ಡೆ ಎಲ್ಲಿಯೂ ಅಂತಹ ಹೇಳಿಕೆಗಳನ್ನು ನೀಡಿಲ್ಲ ಮತ್ತು ಇದೆಲ್ಲವೂ ಸುಳ್ಳು ಪ್ರಚಾರ. ಪೂಜಾ ಅವರ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಬ್ರೇಕ್‌ ಘೋಷಣೆ ಮಾಡಿದ ಗಾಯಕಿ ನೇಹಾ ಕಕ್ಕರ್

Leave a Reply

Your email address will not be published. Required fields are marked *