Gajendra Singh Shekhawat: ಪಾರಂಪರಿಕ ಸ್ಥಳಗಳ ಸಂರಕ್ಷಣೆಗೆ ಸರ್ಕಾರ ಬದ್ದ: ಗಜೇಂದ್ರ ಸಿಂಗ್ ಶೇಖಾವತ್

central minister Gajendra Singh Shekhawat about development of country

ನವದೆಹಲಿ: ಪಾರಂಪರಿಕ ಸ್ಥಳಗಳ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಪಾರಂಪರಿಕ ಸಂಪತ್ತಿನ ರಕ್ಷಣೆಯ ಜತೆಜತೆಗೇ ದೇಶದ ಅಭಿವೃದ್ಧಿಯನ್ನು ಬಯಸುತ್ತದೆ ಎಂದು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ (Gajendra Singh Shekhawat) ಹೇಳಿದ್ದಾರೆ.

ರಾಜ್ಯಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಪಾರಂಪರಿಕ ಸ್ಥಳಗಳಲ್ಲಿ ಸಂಗ್ರಹಿಸಲಾಗುವ ಶುಲ್ಕವನ್ನು ಅದೇ ಪ್ರದೇಶದ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ವಿಶ್ವದಾದ್ಯಂತ ಹೆಚ್ಚಾದ ಕ್ಯಾನ್ಸರ್‌ ಪ್ರಕರಣಗಳು

ಇನ್ನು ಈ ಸಮಯದಲ್ಲಿ ಮಾತನಾಡಿದ ಸಚಿವ ಡಾ. ಜಿತೇಂದ್ರ ಸಿಂಗ್, ಭಾರತ ಸೇರಿದಂತೆ ವಿಶ್ವಾದ್ಯಂತ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿದ್ದು, ಪ್ರತಿವರ್ಷ 2 ಕೋಟಿಗೂ ಅಧಿಕ ಪ್ರಕರಣಗಳು ಜಗತ್ತಿನಲ್ಲಿ ಪತ್ತೆಯಾಗುತ್ತಿವೆ ಎಂದು ಸಹ ಹೇಳಿದ್ದಾರೆ.

ಭಾರತದಲ್ಲಿ 15 ಲಕ್ಷ ಹೊಸ ಪ್ರಕರಣ

ಭಾರತದಲ್ಲಿ ಸುಮಾರು 15 ಲಕ್ಷ ಹೊಸ ಪ್ರಕರಣಗಳು ಕಂಡುಬರುತ್ತಿದ್ದು, ಬದಲಾಗುತ್ತಿರುವ ರೋಗದ ವಿಧಾನ, ಪರಿಸರದ ಅಂಶಗಳು, ಆಹಾರ ಮುಂತಾದ ಹಲವು ಕಾರಣಗಳಿಂದಾಗಿ ರೋಗಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದ್ದಾರೆ. ಅಲ್ಲದೇ,  ಕ್ಯಾನ್ಸರ್ ಸೇರಿದಂತೆ ಹೃದ್ರೋಗ, ಮಧುಮೇಹಗಳೂ ಸಹ ಚಿಕ್ಕವಯಸ್ಸಿನಲ್ಲಿಯೇ ಕಂಡುಬರುತ್ತಿದೆ ಎಂದು ಹೇಳಿದ್ದಾರೆ. 

ಹಾಗೆಯೇ, ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರ ನೆರವು ನೀಡುತ್ತಿದ್ದು, ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಯನ್ನು ಒದಗಿಸಲಾಗಿದೆ. HPV ಲಸಿಕೆ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಔಷಧಗಳ ದರ ಕಡಿಮೆ ಮಾಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಅಮೃತ್‌ ಭಾರತ್‌ ಯೋಜನೆಯಡಿ ರೈಲ್ವೆ ಪ್ರಯಾಣಿಕರಿಗೆ ಉತ್ತಮ ಸೌಕರ್ಯ, ಅಶ್ವಿನಿ ವೈಷ್ಣವ್

Leave a Reply

Your email address will not be published. Required fields are marked *