ಶಿವಮೊಗ್ಗ: ಸಾಗರ (Sagara) ತಾಲ್ಲೂಕು ಅವಿನಹಳ್ಳಿ ಹೋಬಳಿ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಸೂರು ಗ್ರಾಮದಲ್ಲಿ ಅಣುವಿದ್ಯುತ್ ಸ್ಥಾವರ ನಿರ್ಮಿಸುವ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಉದ್ದೇಶವನ್ನು ವಿರೋಧಿಸಿ ಇಂದು ಪ್ರತಿಭಟನೆ ನಡೆಸಲಾಗಿದೆ.
ಮಾಜಿ ಶಾಸಕ ಹರತಾಳು ಹಾಲಪ್ಪ ಭಾಗಿ
ಜನಹೋರಾಟ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಹೋರಾಟದಲ್ಲಿ ಸಾಗರ ತಾಲೂಕಿನ ಮಾಜಿ ಶಾಸಕ ಹರತಾಳು ಹಾಲಪ್ಪ ಸಹ ಭಾಗವಹಿಸಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಅಲ್ಲದೇ, ಈ ಹೋರಾಟದಲ್ಲಿ ಜನರ ಪರವಾಗಿ ನಿಲ್ಲುವುದಾಗಿ ಭರವಸೆ ಸಹ ನೀಡಿದ್ದಾರೆ. ಇನ್ನು ಅಣುಸ್ಥಾವರ ನಿರ್ಮಾಣ ಮಾಡುವುದರಿಂದ ಅಲ್ಲಿನ ಜನರ ಬದುಕಿಗೆ ಮಾರಕವಾಗುವುದು ಬೇಡ ಎಂದು ಜನ ಆಗ್ರಹ ಮಾಡಿದ್ದಾರೆ,
ಈಗಾಗಲೇ, ಶಿವಮೊಗ್ಗ ಜಿಲ್ಲಾಧಿಕಾರಿ ಸೋಮವಾರ ಸ್ಥಾವರದ ಸ್ಥಾಪನೆ ಪ್ರಸ್ತಾವವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ನಂತರವೂ ಬೇಸೂರು ಗ್ರಾಮದ ಬಳಿ ಕೆಳಮಟ್ಟದಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದು, ಅಣು ವಿದ್ಯುತ್ ಸ್ಥಾವರಕ್ಕಾಗಿ ಸೂಕ್ತ ಜಾಗದ ಸಮೀಕ್ಷೆ ನಡೆಯುತ್ತಿದೆ ಎಂಬ ಅನುಮಾನ ಇದೆ. ಹಾಗಾಗಿ ಈ ಬಗ್ಗೆ ಸಹ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ.
ಅಣುವಿದ್ಯುತ್ ಸ್ಥಾವರದಿಂದ ಆಗುವ ಪರಿಣಾಮಗಳು
1 ರಿಂದ 5 ವರ್ಷದ ಅಂದಾಜು
ಕೈಗ ಮತ್ತು ಕಾಸರಗೋಡು, ಹಂಡಿಗೋಡು ಅಧ್ಯಯನದ ವರದಿ ಪ್ರಕಾರ
- ರೈತರ ಬದುಕೇ ಸರ್ವನಾಶ
ರೈತರ ಭೂಮಿ ಫಲವತ್ತತೆ ವಾತಾವರಣದ ಉಷ್ಣತೆಯಿಂದ ಕಡಿಮೆಯಾಗಿ ಅಡಿಕೆ ಹಾಗೂ ಇತರೆ ಬೆಳೆಗಳ ಇಳುವರಿಲ್ಲಿ ಕುಂಠಿತ ಪ್ರಾಣಿ ಸಂಕುಲಗಳು ಮತ್ತು ಮನುಷ್ಯರು ದೀರ್ಘ ಕಾಲದ ಅನಾರೋಗ್ಯ ತುತ್ತಾಗಿ ಸರ್ವಾಂಗ ವೈಫಲ್ಯ, ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗೆ ತುತ್ತಾಗಿ ಸುಮಾರು 10 ರಿಂದ 9 ಜನರಲ್ಲಿ ಕಾಣಿಸಿಕೊಳ್ಳುತ್ತದೆ. - ಶೈಕ್ಷಣಿಕ ಸಂಸ್ಥೆಗಳ ಮೇಲೆ ಆಗುವ ಪರಿಣಾಮಗಳು
ಉದಾಹರಣೆಗೆ ವಿಕಿರಣದಿಂದಾಗಿ ವಿದ್ಯಾರ್ಥಿಗಳ ಬೌದ್ಧಿಕ ಗುಣಮಟ್ಟ ಕಡಿಮೆಯಾಗಿ ಹಾಜರಾತಿ ಕಡಿಮೆಯಾಗುವುದು. ವಿದ್ಯಾರ್ಥಿಗಳ ಜೀವನ ನಾಶವಾಗುವುದು. - ನೀರಾವರಿ ಮೂಲ
ಬಹುಗ್ರಾಮ ನೀರಾವರಿ ಮೂಲ ಶರಾವತಿಯಾಗಿದ್ದು ಸಾಗರ & ಹೊಸನಗರಕ್ಕೆ ಲಿಂಗನಮಕ್ಕಿ ಜಲಾಶಯದ ನೀರನ್ನು ಬಳಸುತ್ತಿರುವುದರಿಂದ ವಿಕಿರಣದಿಂದ ನೀರು ಮಲಿನವಾಗಿ ರೋಗ ಬಾಧೆಗಳು ದಿನೇ ದಿನೇ ಆವರಿಸುತ್ತವೆ. - ಪ್ರವಾಸೋದ್ಯಮ ಕೂಡ ಕುಂಠಿತಗೊಳ್ಳುತ್ತದೆ.
ಉದಾಹರಣೆಗೆ ಜೋಗ, ಇಕ್ಕೇರಿ, ಕೆಳದಿ, ವರದಹಳ್ಳಿ, ಸಿಗಂದೂರು ಕ್ಷೇತ್ರಕ್ಕೆ ಬರುವ ಯಾತ್ರಿಗಳು ಕ್ರಮೇಣ ಕಡಿಮೆಯಾಗುತ್ತಾರೆ. - ಎಲ್ಲಾ ವ್ಯಾಪಾರಸ್ಥರಿಗೂ ಮೀನುಗಾರಿಕೆ ಕೃಷಿ ಆಧಾರಿತ ಸಂಸ್ಥೆಗಳು, ಕುಟುಂಬಗಳು ಇದರ ಅವಲಂಬಿತ ಕೂಲಿ ಕಾರ್ಮಿಕರ ಕುಟುಂಬಗಳು, ಕೃಷಿ ಕಾರ್ಮಿಕ ಕುಟುಂಬಗಳು ಕಡಿಮೆಯಾಗುತ್ತವೆ.
- ಮಠಮಂದಿರಗಳು, ಸಂಸ್ಕೃತ ಅಧ್ಯಯನ ಕೇಂದ್ರಗಳು ಇದರ ವ್ಯಾಪ್ತಿಯ ಕ್ಷೀಣಿಸುತ್ತಾ ಬರುತ್ತವೆ. ಜೊತೆಗೆ ಶುಭ ಕಾರ್ಯಗಳು ನಿಲ್ಲುತ್ತವೆ. ವಧು ವರರು ಅವಿವಾಹಿತರಾಗಿ ಉಳಿದುಕೊಳ್ಳುವ ಸಂಭವ ಹೆಚ್ಚು ಗರ್ಭಿಣಿ ಮಹಿಳೆಯರಿಗೆ ಗರ್ಭಪಾತ ಸಮಸ್ಯೆ ಹೆಚ್ಚಾಗುತ್ತದೆ.
ಇದನ್ನೂ ಓದಿ: ಗಜರಾಜ ಅರ್ಜುನನ ನೆನಪು ಅಮರ: ದಬ್ಬಳಕಟ್ಟೆಯಲ್ಲಿ ಭವ್ಯ ಸ್ಮಾರಕ ಉದ್ಘಾಟಿಸಿದ ಸಚಿವ ಈಶ್ವರ ಖಂಡ್ರೆ
ವರದಿ: ಪ್ರಶಾಂತ್ ಭಟ್
