ಮುಂಬೈ: ಜಾಹೀರಾತು ಕೇವಲ ಜನರನ್ನು ತಲುಪುವುದಷ್ಟೇ ಅಲ್ಲ, ಅದು ವಿಶ್ವಾಸವನ್ನು ನಿರ್ಮಿಸಬೇಕು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಜಾಜು (Sanjay Jaju) ಹೇಳಿದ್ದಾರೆ.
ಆಡ್ ಟ್ರಸ್ಟ್ ಶೃಂಗಸಭೆ
ಮುಂಬೈನಲ್ಲಿ ನಿನ್ನೆ ನಡೆದ ಆಡ್ ಟ್ರಸ್ಟ್ ಶೃಂಗಸಭೆ 2026 ರಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಜಾಹೀರಾತು ವಲಯವು ವ್ಯಾಪ್ತಿ, ಸಂಕೀರ್ಣತೆ ಮತ್ತು ಪ್ರಭಾವದಲ್ಲಿ ಬೆಳೆಯುತ್ತಿದ್ದು, ಜವಾಬ್ದಾರಿಯುತ, ಪಾರದರ್ಶಕ ಮತ್ತು ವಿಶ್ವಾಸಾರ್ಹ ವ್ಯವಸ್ಥೆ ಅಗತ್ಯವಾಗಿದೆ ಎಂದರು.
ಬೆಳವಣಿಗೆ ಆಗಬೇಕು
ಈ ವಲಯದ ಬೆಳವಣಿಗೆ ಮುಂದುವರಿಯಬೇಕಾಗಿದ್ದು, ಆದರೆ ವಿಶೇಷವಾಗಿ ಡಿಜಿಟಲ್ ಕ್ಷೇತ್ರದಲ್ಲಿ ಹೊಣೆಗಾರಿಕೆ ಇರಬೇಕು. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ದೃಷ್ಟಿಕೋನವು ವಿಶ್ವಾಸವನ್ನು ಬೆಳೆಸುವುದು, ಬೆಳವಣಿಗೆಯನ್ನು ಬೆಂಬಲಿಸುವುದು ಮತ್ತು ಜವಾಬ್ದಾರಿಯನ್ನು ಖಚಿತಪಡಿಸಿಕೊಳ್ಳುವುದರ ಮೇಲೆ ಕೇಂದ್ರೀಕರಿಸಿದೆ ಎಂದು ತಿಳಿಸಿದರು
