TOP NEWS
UT Khader announced paperless Karnataka assembly sessions

UT Khader: ಡಿಜಿಟಲ್ ಪಥದತ್ತ ಕರ್ನಾಟಕ ವಿಧಾನಮಂಡಲ: ಇನ್ಮುಂದೆ ಶಾಸಕರು ಹೈಟೆಕ್, ಕಲಾಪಕ್ಕೆ ಸಿಗಲಿದೆ ಐಪ್ಯಾಡ್ ಸ್ಪರ್ಶ!

ಮಂಗಳೂರು: ಕರ್ನಾಟಕದ ಶಾಸನಸಭೆಯ ಇತಿಹಾಸದಲ್ಲೇ ಅತ್ಯಂತ ಕ್ರಾಂತಿಕಾರಕ ಬದಲಾವಣೆಯೊಂದು ಬರಲಿದ್ದು, ಮುಂಬರುವ ಆರು ತಿಂಗಳಲ್ಲಿ ಉಭಯ ಸದನಗಳ ಕಲಾಪಗಳು ಸಂಪೂರ್ಣವಾಗಿ ಕಾಗದ ರಹಿತ (Paperless) ಆಗಲಿವೆ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ (UT Khader) ಪ್ರಕಟಿಸಿದ್ದಾರೆ. ಇನ್ಮುಂದೆ ಅಧಿವೇಶನದಲ್ಲಿ ಪಾಲ್ಗೊಳ್ಳುವ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ದಪ್ಪಗಿನ ಕಾಗದದ ಫೈಲ್‌ಗಳ ಬದಲಾಗಿ, ವಿಶೇಷ ಸಾಫ್ಟ್‌ವೇರ್ ಒಳಗೊಂಡಿರುವ ಅತ್ಯಾಧುನಿಕ ಐಪ್ಯಾಡ್‌ಗಳನ್ನು ಬಳಸಲಿದ್ದಾರೆ. ಈ ಹೊಸ ತಂತ್ರಜ್ಞಾನದಿಂದಾಗಿ ಪ್ರತಿವರ್ಷ ಮುದ್ರಣ ಕಾರ್ಯ ಹಾಗೂ ಸಾಗಾಟಕ್ಕಾಗಿ ಖರ್ಚಾಗುತ್ತಿದ್ದ ಕೋಟ್ಯಂತರ ರೂಪಾಯಿ…

Read More
tamil nadu bjp k Annamalai resigned

Annamalai: ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ: ರಜನಿಕಾಂತ್ ಪಂಚ್ ಡೈಲಾಗ್ ಹೆಸರಲ್ಲಿ ಹೊಸ ಪಕ್ಷ ಕಟ್ಟಲು ಮಾಜಿ ಐಪಿಎಸ್ ಸಿಂಗಂ ಸಿದ್ಧತೆ!

ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಮತ್ತೊಂದು ಭಾರಿ ರಾಜಕೀಯ ದ್ರುವೀಕರಣಕ್ಕೆ ವೇದಿಕೆ ಸಿದ್ಧವಾಗಿದ್ದು, ರಾಜ್ಯ ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ (Annamalai) ಅವರು ಕಮಲ ಪಾಳಯ ತೊರೆದು ಸ್ವಂತ ರಾಜಕೀಯ ಪಕ್ಷ ಕಟ್ಟಲು ನಿರ್ಧರಿಸಿದ್ದಾರೆ. ಜೂನ್ 2 ರಂದು ಅವರು ತಮ್ಮ ಅಂತಿಮ ನಿರ್ಧಾರವನ್ನು ಬಿಜೆಪಿ ವರಿಷ್ಠರಿಗೆ ತಿಳಿಸಲಿದ್ದಾರೆ ಎಂದು ನಂಬಲಾರ್ಹ ಮೂಲಗಳು ಖಚಿತಪಡಿಸಿವೆ. ಆರಂಭದಲ್ಲಿ ಅವರು ತಮಿಳುನಾಡಿನಲ್ಲಿ ದೊಡ್ಡ ಮಟ್ಟದ ಜನಾಂದೋಲನ (ಜನರ ಚಳವಳಿ) ಆರಂಭಿಸಲಿದ್ದು, ಮುಂದಿನ ದಿನಗಳಲ್ಲಿ ಅದನ್ನು ಅಧಿಕೃತ ರಾಜಕೀಯ ಪಕ್ಷವನ್ನಾಗಿ ಪರಿವರ್ತಿಸಲಿದ್ದಾರೆ….

Read More
dk shivakumar facing new problem GBA portfolio

DK Shivakumar: ಸಿಎಂ ಆದ ಮೇಲೂ ಬೆಂಗಳೂರು ಅಭಿವೃದ್ಧಿ ಖಾತೆ ಉಳಿಸಿಕೊಳ್ಳುತ್ತಾರಾ ಡಿಕೆಶಿ? ಸಚಿವ ಸ್ಥಾನದ ಮೇಲ ಕಣ್ಣಿಟ್ಟ ಕೈ ನಾಯಕರು!

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಡಿ.ಕೆ. ಶಿವಕುಮಾರ್ (DK Shivakumar) ಅವರು ಈ ಹಿಂದೆ ಉಪಮುಖ್ಯಮಂತ್ರಿಯಾಗಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ‘ಬ್ರ್ಯಾಂಡ್ ಬೆಂಗಳೂರು’ ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಘೋಷಿಸಿದ್ದರು. ಕಳೆದ ಮೂರು ವರ್ಷಗಳಿಂದ ರಾಜಧಾನಿಯ ಉಸ್ತುವಾರಿಯನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಬಂದಿರುವ ಅವರ ಅದೇ ಸಚಿವ ಖಾತೆಯ ಮೇಲೆ ಈಗ ಸ್ವಪಕ್ಷದ ಹಿರಿಯ ನಾಯಕರ ಕಣ್ಣು ಬಿದ್ದಿದೆ. ಡಿಕೆಶಿ ಅವರು ಮುಖ್ಯಮಂತ್ರಿಯಾದ ಮೇಲೂ ಈ ಪ್ರಭಾವಿ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡರೆ, ಅದನ್ನು ಪಕ್ಷದ…

Read More
crime 1 and half year old kid body tortured by stepfather in kerala

Crime: ಕೇರಳದಲ್ಲಿ ಒಂದೂವರೆ ವರ್ಷದ ಕಂದಮ್ಮನ ಭೀಕರ ಕೊಲೆ: ಆಹಾರ ಸಿಲುಕಿ ಸಾವು ಎಂದಿದ್ದ ಪ್ರಕರಣದ ಹಿಂದೆ ಬಯಲಾಯ್ತು ಹೆತ್ತ ತಾಯಿ, ಪ್ರಿಯಕರನ ಕ್ರೌರ್ಯ!

ಕೇರಳ: ಊಟ ಮಾಡುವಾಗ ಗಂಟಲಿನಲ್ಲಿ ಆಹಾರ ಸಿಲುಕಿ ಮಗು ಸಾವನ್ನಪ್ಪಿದೆ ಎಂದು ನಂಬಿಸಲು ಯತ್ನಿಸಿದ್ದ ಪ್ರಕರಣವೊಂದರಲ್ಲಿ, ಮಗುವಿನ ಮೇಲೆ ನಡೆದಿರುವ (Crime) ಸಾಲು ಸಾಲು ದೌರ್ಜನ್ಯ ಮತ್ತು ಕೊಲೆ ಸಂಚಿನ ರೋಮಾಂಚನಕಾರಿ ಸತ್ಯ ಬಯಲಾಗಿದೆ. ಕೇರಳದ ರಾಜಧಾನಿ ತಿರುವನಂತಪುರಂನಿಂದ ಕೇವಲ 20 ಕಿಲೋಮೀಟರ್ ದೂರದಲ್ಲಿರುವ ನೆಡುಮಂಗಾಡ್‌ನ ಪಾನವೂರಿನಲ್ಲಿ ಈ ಘೋರ ಕೃತ್ಯ ನಡೆದಿದ್ದು, ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಕೇವಲ ಒಂದೂವರೆ ವರ್ಷದ ಮಗು ಆರ್ಶಿದ್‌ನನ್ನು ಆತನ ತಾಯಿಯ ಲಿವ್-ಇನ್ ಪಾರ್ಟ್‌ನರ್ (ಸಾಕುತಂದೆ) ಹೊಡೆದು ಕೊಂದಿದ್ದು, ಹೆತ್ತ…

Read More
DK Shivakumar fans put flex and banners all over the bengaluru

Bengaluru: ಮುಖ್ಯಮಂತ್ರಿಯಾಗಿ ಡಿಕೆಶಿ ಪ್ರಮಾಣವಚನ ಸಡಗರ: ಸ್ವಪಕ್ಷದವರಿಂದಲೇ ನಿಯಮಗಳ ಉಲ್ಲಂಘನೆ, ಇಡೀ ಸಿಟಿ ಫ್ಲೆಕ್ಸ್‌ಮಯ!

ಬೆಂಗಳೂರು: ನಗರದ ಸೌಂದರ್ಯ ಹಾಳುಗೆಡವಿ ಎಲ್ಲಾದರೂ ಅನಧಿಕೃತ ಬ್ಯಾನರ್ ಅಥವಾ ಫ್ಲೆಕ್ಸ್ ಹಾಕಿದರೆ ನಾನೇ ಖುದ್ದಾಗಿ ಕೇಸ್ ದಾಖಲಿಸಲು ಸೂಚಿಸುತ್ತೇನೆ” ಎಂದು ಹಿಂದೆ ಉಪಮುಖ್ಯಮಂತ್ರಿಯಾಗಿದ್ದ, ಪ್ರಸ್ತುತ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್ ಅವರು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ನೀಡಿದ್ದರು. ಆದರೆ, ಜೂನ್ 3ರಂದು ನೆರವೇರಲಿರುವ ಅವರದೇ ಐತಿಹಾಸಿಕ ಪ್ರಮಾಣವಚನ ಸ್ವೀಕಾರ ಸಮಾರಂಭದ ಜೋಶ್‌ನಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ತಮ್ಮದೇ ನಾಯಕನ ಆದೇಶಕ್ಕೆ ಕವಡೆ ಕಾಸಿನ ಕೀಮ್ಮತ್ತು ನೀಡಿಲ್ಲ. ವರಿಷ್ಠರ ಸೂಚನೆ ಹಾಗೂ ಡಿಕೆಶಿಯವರ ಕಡಕ್ ಆದೇಶಗಳನ್ನು…

Read More
Taapsee Pannu shares how she Tortured body to get flat tummy

Taapsee Pannu: ಬೇರೆಯವರನ್ನು ನೋಡಿ ನಿಮ್ಮ ದೇಹವನ್ನು ಹಿಂಸಿಸಬೇಡಿ: ಬಾಲ್ಯದ ತಪ್ಪುಗಳನ್ನು ನೆನಪಿಸಿಕೊಂಡ ನಟಿ ತಾಪ್ಸಿ ಪನ್ನು

ಮುಂಬೈ: ಚಿತ್ರರಂಗದ ಸಾಂಪ್ರದಾಯಿಕ ಸೌಂದರ್ಯದ ಮಾಪನಗಳನ್ನು ಮೊದಲಿನಿಂದಲೂ ಪ್ರಶ್ನಿಸುತ್ತಾ ಬಂದಿರುವ ಬಾಲಿವುಡ್ ನಟಿ ತಾಪ್ಸಿ ಪನ್ನು, (Taapsee Pannu) ಇತ್ತೀಚೆಗೆ ಮಹಿಳೆಯರಲ್ಲಿ ಹೆಚ್ಚಾಗುತ್ತಿರುವ ಫ್ಲಾಟ್ ಟಮ್ಮಿ ಅಥವಾ ಸೀದಾ ಹೊಟ್ಟೆಯ ಗೀಳಿನ ಬಗ್ಗೆ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿರುವ ಅವರು, ತಾವೂ ಕೂಡ ಒಂದು ಕಾಲದಲ್ಲಿ ಹೊಟ್ಟೆಯ ಕೆಳಭಾಗದ ಕೊಬ್ಬನ್ನು ಕರಗಿಸಲೇಬೇಕು ಎಂಬ ಹಠಕ್ಕೆ ಬಿದ್ದು ತಮ್ಮ ದೇಹವನ್ನು ತಾವೇ ಹಿಂಸಿಸಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಚಂದ ಕಾಣಿಸುವ ಫೋಟೋಗಳಿಗಾಗಿ ಮಹಿಳೆಯರು ತಮ್ಮ…

Read More
I will not go to delhi says ut khader

UT Khader: ಮಂತ್ರಿಗಿರಿಗಾಗಿ ನಾನು ದೆಹಲಿಗೆ ಹೋಗಲ್ಲ, ಜನರ ಸೇವೆಗಾಗಿ ಮಂಗಳೂರಿಗೆ ಹೋಗ್ತೀನಿ: ಸ್ಪೀಕರ್ ಯು.ಟಿ. ಖಾದರ್ ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನೂತನ ಸಚಿವ ಸಂಪುಟ ರಚನೆಯ ಕಸರತ್ತು ಬಿರುಸಿನಿಂದ ಸಾಗಿದ್ದು, ದೆಹಲಿಯಲ್ಲಿ ಮಂತ್ರಿ ಸ್ಥಾನಕ್ಕಾಗಿ ಶಾಸಕರು ಭಾರಿ ಲಾಬಿ ನಡೆಸುತ್ತಿರುವ ಬೆನ್ನಲ್ಲೇ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ (UT Khader) ಅತ್ಯಂತ ಪ್ರಮುಖ ಹೇಳಿಕೆ ನೀಡಿದ್ದಾರೆ. ಹೊಸ ಕ್ಯಾಬಿನೆಟ್‌ನಲ್ಲಿ ತಮಗೆ ಸ್ಥಾನ ನೀಡುವುದು ಅಥವಾ ಬಿಡುವುದು ಪಕ್ಷದ ವರಿಷ್ಠರ ವಿವೇಚನೆಗೆ ಬಿಟ್ಟದ್ದು. ತಾವಂತೂ ಸಚಿವ ಸ್ಥಾನದ ಆಕಾಂಕ್ಷಿಯಾಗಿ ಹಠ ಹಿಡಿದು ಹೈಕಮಾಂಡ್ ಭೇಟಿಗೆ ದೆಹಲಿಗೆ ಹೋಗುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ….

Read More