Narendra Modi: “ಮೋದಿ ಹೇಳಿದ್ದಾರೆ, ನಾನು ಆಫೀಸ್‌ಗೆ ಬರಲ್ಲ”: ಪ್ರಧಾನಿ ಮನವಿಯನ್ನೇ ನೆಪವಾಗಿಸಿ WFH ಕೇಳಿದ ಯುವತಿಯ ಇಮೇಲ್ ವೈರಲ್!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ‘ಮಿತವ್ಯಯ’ದ ಕರೆಯನ್ನು ಯುವತಿಯೊಬ್ಬಳು ತನಗೆ ಬೇಕಾದಂತೆ ಬಳಸಿಕೊಂಡಿರುವ ರೀತಿ ಈಗ ಇಂಟರ್ನೆಟ್‌ನಲ್ಲಿ ಭಾರಿ ನಗು ಹರಿಸುತ್ತಿದೆ. ದೇಶಕ್ಕಾಗಿ ಇಂಧನ ಉಳಿಸಿ ಎಂದು ಪ್ರಧಾನಿ ಹೇಳಿದ್ದನ್ನೇ ಅಸ್ತ್ರವಾಗಿಸಿಕೊಂಡ ಸುಪ್ರಿಯಾ ಎಂಬ ಉದ್ಯೋಗಿ, ತನಗೆ 2027ರವರೆಗೆ ‘ವರ್ಕ್ ಫ್ರಮ್ ಹೋಮ್’ ಬೇಕೆಂದು ಕಂಪನಿಗೆ ಇಮೇಲ್ ಮಾಡಿದ್ದಾಳೆ. ದೇಶಪ್ರೇಮದ ಹೆಸರಲ್ಲಿ ‘ಮನೆಗೆಲಸ’ದ ಬೇಡಿಕೆ ಪಶ್ಚಿಮ ಏಷ್ಯಾದ ಯುದ್ಧದ ಭೀತಿಯಿಂದಾಗಿ ಪೆಟ್ರೋಲ್ ಉಳಿಸಲು ಪ್ರಧಾನಿ ಮೋದಿ ಜನತೆಗೆ ಮನವಿ ಮಾಡಿದ್ದರು. ಇದನ್ನು ಗಂಭೀರವಾಗಿ…
