ಬೆಂಗಳೂರು: ಸಾಮಾನ್ಯವಾಗಿ ಮದುವೆಯಾದ ನಂತರ ಅನೇಕ ಮಹಿಳೆಯರು ಸರ್ನೇಮ್ ಬದಲಾವಣೆ ಮಾಡಿಕೊಳ್ಳುತ್ತಾರೆ. ಈ ವಿಚಾರದಲ್ಲಿ ನಟಿಯರೂ ಸಹ ಹೊರತಲ್ಲ ಇದೀಗ ನಟಿ ಸಮಂತಾ (Samantha) ಸಹ ಹೆಸರು ಬದಲಾವಣೆ ಮಾಡಿಕೊಂಡಿದ್ದಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಹಿಂದೆಯೂ ಸೇರಿಸಿಕೊಂಡಿದ್ದ ನಟಿ
ಸಮಂತಾ ಅಕ್ಕಿನೇನಿ ನಾಗಚೈತನ್ಯ ಅವರ ಜೊತೆ ಮದುವೆಯಾಗಿದ್ದಾಗ ಸಹ ಸಿನಿಮಾಗಳ ನೇಮ್ ಕಾರ್ಡ್ನಲ್ಲಿ ‘ಸಮಂತಾ ಅಕ್ಕಿನೇನಿ’ ಎಂದು ಹೆಸರು ಬಂದಿರುವ ಅನೇಕ ಉದಾಹರಣೆಗಳಿದೆ. ಹಾಗೆಯೇ, ಅವರು ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಕೂಡ ಅಕ್ಕಿನೇನಿ ಎಂದು ಹೆಸರನ್ನ ಸೇರಿಸಿಕೊಂಡಿದ್ದರು. ಅದರ ನಂತರ ಕೂಡ ಅವರು ಅಕ್ಕಿನೇನಿ ಹೆಸರನ್ನ ಸೋಷಿಯಲ್ ಮೀಡಿಯಾದಿಂದ ತೆಗೆದಿದ್ದರು. ಇದರಿಂದಲೇ ಅವರ ಡಿವೋರ್ಸ್ ವಿಚಾರ ಸುದ್ದಿಯಾಗಲು ಆರಂಭವಾಗಿತ್ತು.
ಹೊಸ ಸಿನಿಮಾದಲ್ಲಿ ಸಮಂತಾ ಹೆಸರಿನ ಬಗ್ಗೆ ಕುತೂಹಲ
ಈಗ ಸಮಂತಾ ಅವರು ಮತ್ತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿರ್ದೇಶಕ ರಾಜ್ ನಿಡಿಮೋರು ಅವರ ಜೊತೆ ವಿವಾಹವಾಗಿದ್ದು, ಅವರ ಹೆಸರು ಮುಂದಿನ ಸಿನಿಮಾದಲ್ಲಿ ಏನಿದರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಇನ್ನೂ ಹೆಸರನ್ನ ಚೇಂಜ್ ಮಾಡಿಲ್ಲ. ಆದರೆ ಅವರ ಮುಂದಿನ ಸಿನಿಮಾದ ನೇಮ್ ಕಾರ್ಡ್ನಲ್ಲಿ ಏನಿರಲಿದೆ ಕಾದು ನೋಡಬೇಕಿದೆ.
ಸದ್ಯ ಸಮಂತಾ ‘ಮಾ ಇಂತಿ ಬಂಗಾರಂ’ ಚಿತ್ರದಲ್ಲಿ ನಟನೆ ಮಾಡುತ್ತಿದ್ದಾರೆ. ಇದನ್ನ ಅವರ ಪತಿ ರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಹಾಗಾಗಿ ಈ ಸಿನಿಮಾದ ಟೈಟಲ್ ಕಾರ್ಡ್ನಲ್ಲಿ ಸಮಂತಾ ಹೆಸರು ಕಾಣಿಸಿಕೊಳ್ಳುತ್ತದೆಯೇ? ಅಥವಾ ಅದು ಸಮಂತಾ ನಿಡಿಮೋರು ಆಗಿರುತ್ತದೆಯೇ? ಎನ್ನುವ ಅನುಮಾನ ಈಗ ಮೂಡಿದೆ.
ಇದನ್ನೂ ಓದಿ: ಬಾಲಿವುಡ್ ಈಸ್ ಬ್ಯಾಕ್, ಹೀಗ್ಯಾಕಂದ್ರು ಸ್ಟಾರ್ ನಿರ್ದೇಶಕ?
