Virat Kohli: ದಾಖಲೆ ಬರೆದ ವಿರಾಟ್‌ ಕೊಹ್ಲಿ, 7ನೇ ಏಕದಿನ ಶತಕ ಬಾರಿಸಿದ ಕಿಂಗ್

Virat Kohli writes History in ODI match

ಇಂದೋರ್‌ನಲ್ಲಿ ಭಾನುವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಅದ್ಭುತ ಶತಕ ಸಿಡಿಸಿ ಇತಿಹಾಸ ಬರೆದಿದ್ದಾರೆ. ಕೊಹ್ಲಿ 91 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನ ಬಾರಿಸಿದ್ದು, ಕಿಂಗ್‌ ಎಂದು ಮತ್ತೆ ಸಾಬೀತು ಮಾಡಿದ್ದಾರೆ.

7 ನೇ ಏಕದಿನ ಶತಕ

ಇನ್ನು ಮಾಹಿತಿಗಳ ಪ್ರಕಾರ, ಇದು ನ್ಯೂಜಿಲೆಂಡ್ ವಿರುದ್ಧ ಕೊಹ್ಲಿ ಅವರ 7 ನೇ ಏಕದಿನ ಶತಕವಾಗಿದ್ದು, ಈ ಏಕದಿನ ಪಂದ್ಯಗಳಲ್ಲಿ ಹಿಂದೆ ಕಿವೀಸ್ ವಿರುದ್ಧ ಬೇರೆ ಯಾವುದೇ ಬ್ಯಾಟ್ಸ್‌ಮನ್ ಹೆಚ್ಚು ಶತಕ ಗಳಿಸಿಲ್ಲ. ಈ ಪಂದ್ಯಕ್ಕೂ ಮೊದಲು, ವಿರಾಟ್ ಆಸ್ಟ್ರೇಲಿಯಾದ ದಿಗ್ಗಜ ರಿಕಿ ಪಾಂಟಿಂಗ್ ಮತ್ತು ಭಾರತದ ದಿಗ್ಗಜ ವೀರೇಂದ್ರ ಸೆಹ್ವಾಗ್ ಅವರ 6 ಶತಕಗಳ ದಾಖಲೆಯನ್ನ ಮುರಿದಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು ಶತಕಗಳ ಲಿಸ್ಟ್‌ ಹೀಗಿದೆ (ODIಗಳು)

7 – ವಿರಾಟ್ ಕೊಹ್ಲಿ (36 ಇನ್ನಿಂಗ್ಸ್)

6 – ರಿಕಿ ಪಾಂಟಿಂಗ್ (50 ಇನ್ನಿಂಗ್ಸ್)

6 – ವೀರೇಂದ್ರ ಸೆಹ್ವಾಗ್ (23 ಇನ್ನಿಂಗ್ಸ್)

5 – ಸಚಿನ್ ತೆಂಡೂಲ್ಕರ್ (41 ಇನ್ನಿಂಗ್ಸ್)

5 – ಸನತ್ ಜಯಸೂರ್ಯ (45 ಇನ್ನಿಂಗ್ಸ್)

ವಿರಾಟ್‌ ಶತಕ ಬಾರಿಸಿದರೂ ಸೋತ ಭಾರತ

ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ 108 ಎಸೆತಗಳಲ್ಲಿ 124 ರನ್‌ಗಳನ್ನ ಬಾರಿಸಿದರೂ ಸಹ ಅವರ ಶತಕ ವ್ಯರ್ಥವಾಗಿದ್ದು, ನ್ಯೂಜಿಲೆಂಡ್ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ 41 ರನ್‌ಗಳ ಜಯದೊಂದಿಗೆ ಭಾರತದ ವಿರುದ್ಧ 2-1 ಸರಣಿ ಜಯ ಸಾಧಿಸಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕಿ ನಿವೃತ್ತಿ ಘೋಷಣೆ, ಅಲಿಸ್ಸಾ ಹೀಲಿ ನಿರ್ಧಾರಕ್ಕೆ ಕಾರಣವೇನು?

Leave a Reply

Your email address will not be published. Required fields are marked *