ಉತ್ತರ ಪ್ರದೇಶ: ಜಿಮ್‌ಗಳ ಸೋಗಿನಲ್ಲಿ ಅಕ್ರಮವಾಗಿ ಧಾರ್ಮಿಕ ಮತಾಂತರ (Conversion) ಮಾಡುತ್ತಿದ್ದ ಪ್ರಕರಣ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಬೆಳಕಿಗೆ ಬಂದಿದ್ದು, ಈ ವಿಚಾರವಾಗಿ ಪೊಲೀಸರು ಆರೋಪಿಗಳನ್ನ ಬಂಧನ ಮಾಡಿದ್ದಾರೆ.
4 ಜನ ಆರೋಪಿಗಳ ಬಂಧನ
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಲ್ಲಿಯವರೆಗೆ ಐದು ಜನರನ್ನು ಬಂಧಿಸಿದ್ದಾರೆ ಮತ್ತು ಜಿಲ್ಲೆಯಾದ್ಯಂತ ಕನಿಷ್ಠ ಐದು ಫಿಟ್‌ನೆಸ್ ಕೇಂದ್ರಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಮಾಹಿತಿಗಳ ಪ್ರಕಾರ ಮೊದಲ ಪ್ರಕರಣದಲ್ಲಿ, ಜಿಮ್ ತರಬೇತಿಯ ನೆಪದಲ್ಲಿ ಆಮಿಷವೊಡ್ಡಲಾಗಿದೆ. ಅಲ್ಲದೇ, ಲೈಂಗಿಕ ಶೋಷಣೆ ಮಾಡಿದ್ದಲ್ಲದೇ, ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಮತ್ತು ಮತಾಂತರವಾಗುತ್ತೆ ಒತ್ತಡ ಸಹ ಹಾಕಲಾಗಿದೆ ಎಂದು ಆರೋಪ ಮಾಡಿ ಇಬ್ಬರು ಮಹಿಳೆಯರು ದೂರು ನೀಡಿದ್ದಾರೆ. ಈ ಆರೋಪದ ಅಡಿಯಲ್ಲಿ ಮಿರ್ಜಾಪುರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಪುರುಷರನ್ನು ಮೊಹಮ್ಮದ್ ಶೇಖ್ ಅಲಿ ಆಲಂ, ಫೈಜಲ್ ಖಾನ್, ಜಹೀರ್ ಮತ್ತು ಸಾದಬ್ ಎಂದು ಗುರುತಿಸಲಾಗಿದೆ.
ಈ ಆರೋಪಿಗಳನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಸದ್ಯ ಜೈಲಿಗೆ ಕಳುಹಿಸಲಾಗಿದೆ. ಅಲ್ಲದೇ, ಈ ಮತಾಂತರ ಜಾಲದ ಹಿಂದೆ ಇರುವ ಇತರ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಹೇಗೆ ಕೆಲಸ ಮಾಡುತ್ತಿತ್ತು ಈ ಜಾಲ?
ಎಫ್‌ಐಆರ್ ಪ್ರಕಾರ, ಜಿಮ್ ತರಬೇತುದಾರ ಶೇಖ್ ಅಲಿ ಮೊದಲು ವ್ಯಾಯಾಮದ ಸಮಯದಲ್ಲಿ ಮಹಿಲೆಯರ ಜೊತೆ ಸಲುಗೆ ಬೆಳೆಸಿಕೊಳ್ಳುತ್ತಿದ್ದ. ನಂತರ ಲೈಂಗಿಕ ದೌರ್ಜನ್ಯ ಎಸಗಿ, ಆಕ್ಷೇಪಾರ್ಹ ಫೋಟೋಗಳು ಮತ್ತು ವೀಡಿಯೊಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿ, ಹಣ ಸುಲಿಗೆ ಮಾಡುತ್ತಿದ್ದೆ ಎನ್ನಲಾಗಿದೆ. ಅಲ್ಲದೇ, ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕಾಗಿ ಪೀಡಿಸುತ್ತಿದ್ದ. ಅಲ್ಲದೇ, ಆಕೆಯ ಹೆಸರಿನಲ್ಲಿ ಸಾಲವನ್ನೂ ಪಡೆದಿದ್ದ ಎಂದು ಆರೋಪಿಸಲಾಗಿದೆ.
ಅಲ್ಲದೇ, ಮಹಿಳೆ ಮಾಡಿರುವ ಆರೋಪದ ಪ್ರಕಾರ, ಆಕೆಗೆ ಧರ್ಮ ಬದಲಾಯಿಸುವಂತೆ ಪದೇ ಪದೇ ಒತ್ತಡ ಹೇರಲಾಯಿತು, ಬುರ್ಖಾ ಧರಿಸುವಂತೆ ಮಾಡಲಾಯಿತು, ದಿನಕ್ಕೆ ಐದು ಬಾರಿ ನಮಾಜ್ ಮಾಡುವಂತೆ ಹೇಳಲಾಗುತ್ತಿತ್ತು. ದರ್ಗಾಕ್ಕೆ ಕರೆದೊಯ್ದು ಮತಾಂತರಕ್ಕಾಗಿ ಕಲ್ಮಾ ಪಠಿಸುವಂತೆ ಒತ್ತಾಯ ಮಾಡಲಾಗಿತ್ತು.
ಇದನ್ನೂ ಓದಿ: ಭೀಕರ ವಿಮಾನ ಅಪಘಾತ, ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ದುರ್ಮರಣ
