Tennis; ಐಟಿಎಫ್ ಡಬ್ಲ್ಯು-35 ಮಹಿಳಾ ಟೆನಿಸ್ ಟೂರ್ನಿ ಫೈನಲ್‌ನಲ್ಲಿ ಗೆದ್ದ ವೈಷ್ಣವಿ-ಅಂಕಿತಾ

Tennis ITF W-35 women doubles semi final match

ಬೆಂಗಳೂರು: ಕಲಬುರಗಿಯಲ್ಲಿ ನಡೆಯುತ್ತಿರುವ ಐಟಿಎಫ್ ಡಬ್ಲ್ಯು-35 (ITF W-35) ಮಹಿಳಾ ಟೆನಿಸ್ (Tennis) ಟೂರ್ನಿಯಲ್ಲಿಂದು ನಡೆದ ಮಹಿಳಾ ಡಬಲ್ಸ್ ವಿಭಾಗದ‌ ಫೈನಲ್‌ನಲ್ಲಿ ವೈಷ್ಣವಿ ಅಡ್ಕರ್ ಮತ್ತು ಅಂಕಿತಾ ರೈನಾ ಜೋಡಿ ಗೆಲುವು ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

2-0 ಸೆಟ್‌ಗಳ ಅಂತರದಿಂದ ಗೆಲುವು

 ಉತ್ತಮ ಪ್ರದರ್ಶನ ನೀಡಿದ ಈ ಜೋಡಿಯು ಕರ್ನಾಟಕದ ಸೋಹಾ ಸಾದಿಕ್ ಮತ್ತು ಆಕಾಂಕ್ಷಾ ದಿಲೀಪ್ ನಿಟ್ಟೂರು ಜೋಡಿಯನ್ನು 2-0 ಸೆಟ್‌ಗಳ ಅಂತರದಿಂದ ಪರಾಭವಗೊಳಿಸಿತು.  ಇನ್ನು ಸಿಂಗಲ್ಸ್ ವಿಭಾಗದಲ್ಲೂ ವೈಷ್ಣವಿ ಅಡ್ಕರ್ ಹಾಗೂ ಅಂಕಿತಾ ರೈನಾ ಫೈನಲ್ ಪ್ರವೇಶಿಸಿದ್ದಾರೆ.

 ಇಂದು ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ವೈಷ್ಣವಿ ಅಡ್ಕರ್ ಅವರು ಗಿಂಬೆರೆ ಜೆ. ಅವರನ್ನು 2-0 ಅಂತರದಿಂದ ಸೋಲಿಸಿದರೆ, ಅಂಕಿತಾ ರೈನಾ ಅವರು ನಾಕ್ಲೊಟಿ ಅವರನ್ನು 2-1 ಅಂತರದಿಂದ ಪರಾಭವಗೊಳಿಸಿದರು. ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯವು ನಾಳೆ ನಡೆಯಲಿದೆ.

ಇದನ್ನೂ ಓದಿ: ಐಟಿಎಫ್ ಏಷ್ಯಾ ಚಾಂಪಿಯನ್‌ಶಿಪ್‌ಗೆ ಕರ್ನಾಟಕದ ಆಟಗಾರರು ಆಯ್ಕೆ

Leave a Reply

Your email address will not be published. Required fields are marked *