DK Shivakumar: ಸಾರಿಗೆ ಸುಧಾರಣೆಗೆ ಸರ್ಕಾರದ ಬಿಗ್ ಪ್ಲಾನ್: ಹಳ್ಳಿಗಳಿಗೆ ಸಿಗಲಿವೆ ಹೊಸ ಬಸ್ಸುಗಳು
ಬೆಂಗಳೂರು: ರಾಜ್ಯದ ಸಾರ್ವಜನಿಕ ಸಾರಿಗೆ ರಂಗಕ್ಕೆ ಹೊಸ ಕಳೆ ತುಂಬಲು ಮುಂದಾಗಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದ ಸಚಿವ ಸಂಪುಟ ಸಭೆಯು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ. ಎರಡನೇ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಸಾರಿಗೆ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಕೋಟ್ಯಂತರ ರೂಪಾಯಿ ವೆಚ್ಚದ ವಿನೂತನ ಯೋಜನೆಗಳಿಗೆ ಒಪ್ಪಿಗೆ ಸೂಚಿಸಲಾಗಿದೆ. 620 ಬಸ್ ಖರೀದಿಗೆ ಸಿದ್ಧತೆ ರಾಜ್ಯದ ವಿವಿಧ ಭಾಗಗಳಲ್ಲಿ ಸಾರಿಗೆ ಸಂಪರ್ಕವನ್ನು ಮತ್ತಷ್ಟು ಸಲೀಸುಗೊಳಿಸುವ ಸಲುವಾಗಿ ಒಟ್ಟು 620 ನೂತನ ಬಸ್‌ಗಳನ್ನು ಖರೀದಿಸಲು ಸರ್ಕಾರ ಸಜ್ಜಾಗಿದೆ….
