G Parameshwar: ಡಿಜಿಪಿ ಅಮಾನತು ಹಿಂಪಡೆತ ಹಾಗೂ ಐಪಿಎಲ್ ವಿವಾದ: ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ
ಬೆಂಗಳೂರು: ರಾಜ್ಯದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಎರಡು ಪ್ರಮುಖ ವಿಚಾರಗಳ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ (G Parameshwar) ಅವರು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಡಿಜಿಪಿ ರಾಮಚಂದ್ರರಾವ್ ಅವರ ಅಮಾನತು ಆದೇಶ ವಾಪಸ್ ಹಾಗೂ ಐಪಿಎಲ್ ಪಂದ್ಯಗಳು ಬೆಂಗಳೂರಿನಿಂದ ಕೈತಪ್ಪಿರುವ ಬಗ್ಗೆ ಅವರು ಸುದೀರ್ಘವಾಗಿ ಮಾತನಾಡಿದ್ದಾರೆ. ನಿವೃತ್ತಿ ಹಿನ್ನೆಲೆ ಡಿಜಿಪಿ ಅಮಾನತು ವಾಪಸ್: ಡಿಜಿಪಿ ರಾಮಚಂದ್ರರಾವ್ ಅವರು ಇದೇ ತಿಂಗಳ ಕೊನೆಯಲ್ಲಿ ನಿವೃತ್ತರಾಗುತ್ತಿರುವುದರಿಂದ, ಅವರ ಅಮಾನತನ್ನು ಮುಖ್ಯಮಂತ್ರಿಗಳ ಒಪ್ಪಿಗೆಯೊಂದಿಗೆ ರದ್ದುಗೊಳಿಸಲಾಗಿದೆ. “ನಿವೃತ್ತಿಯ ನಂತರ ಪಿಂಚಣಿ…
