Crime: ಲಾವಣ್ಯ ಕೊಲೆ ಆರೋಪಿ ಚೇತನ್ ಬಜರಂಗದಳದ ಕಾರ್ಯಕರ್ತನಲ್ಲ: ವೈರಲ್ ಫೋಟೋ ಕುರಿತು ಸಂಘಟನೆ ಸ್ಪಷ್ಟನೆ
ಮಂಗಳೂರು: ಕರಾವಳಿಯ ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ನಡೆದ ಯುವತಿ ಲಾವಣ್ಯ ಹತ್ಯೆ ಪ್ರಕರಣ ಭಾರಿ ಸಂಚಲನ ಮೂಡಿಸಿದ್ದು, ಆರೋಪಿ (Crime) ಚೇತನ್‌ನ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಆತ ಕೇಸರಿ ಶಾಲು ಧರಿಸಿ ಬಜರಂಗದಳದ ಮುಖಂಡನಂತೆ ಕಾಣುವ ಚಿತ್ರಗಳು ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿವೆ. ಫೋಟೋ ವಿವಾದಕ್ಕೆ ಬಜರಂಗದಳ ಸ್ಪಷ್ಟನೆ: ವೈರಲ್ ಫೋಟೋಗಳ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಬಜರಂಗದಳದ ಪ್ರಮುಖರು, ಆರೋಪಿಗೂ ತಮ್ಮ ಸಂಘಟನೆಗೂ ಯಾವುದೇ ನೇರ ಅಥವಾ ಪರೋಕ್ಷ…
